ಬದಿಯಡ್ಕ: ಹವ್ಯಕ ಮಹಾಮಂಡಲಾAತರ್ಗತ ಮುಳ್ಳೇರಿಯ ಮಂಡಲದ ಆಶ್ರಯದಲ್ಲಿ ಬದಿಯಡ್ಕದಲ್ಲಿರುವ ಶ್ರೀಭಾರತೀ ವಿದ್ಯಾಪೀಠದಲ್ಲಿ ಎಂಟರಿAದ ಪದವಿ ತರಗತಿಯ ವರೆಗಿನ ವಿದ್ಯಾರ್ಥಿಗಳಿಗಾಗಿ ಒತ್ತಡ ಮುಕ್ತ ಅಧ್ಯಯನ ಮತ್ತು ಹದಿಹರೆಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದರ ಕುರಿತಾಗಿ ತರಬೇತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾಮಂಡಲ ಮುಷ್ಟಿಭಿಕ್ಷಾ ವಿಭಾಗ ಪ್ರಧಾನ ಮೀನಗದ್ದೆ ಶ್ರೀಕೃಷ್ಣ ಭಟ್ ಧ್ವಜಾರೋಹಣಗೈದರು. ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಅಧ್ಯಕ್ಷತೆ ವಹಿಸಿದ್ದರು. ಮಂಡಲ ಮಾತೃವಿಭಾಗ ಪ್ರಧಾನೆ ಕುಸುಮ ಪೆರ್ಮುಖ, ಶ್ರೀಭಾರತೀ ವಿದ್ಯಾಪೀಠದ ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಮಂಡಲ ಸಂಘಟನ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಶುಭಹಾರೈಸಿದರು. ಶಿಕ್ಷಣ ತಜ್ಞ ಉಂಡೆಮನೆ ವಿಶ್ವೇಶ್ವರ ಭಟ್ ಮತ್ತು ಉಪಬೋಧೆ ತಜ್ಞೆ ವಿದ್ಯಾ ಎಸ್ ತರಗತಿ ನಡೆಸಿಕೊಟ್ಟರು. ವಿವಿಧ ವಲಯಗಳಿಂದ ಒಟ್ಟು ೫೮ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಡಲ ವಿದ್ಯಾರ್ಥಿ ವಾಹಿನಿ ವಿಭಾಗ ಪ್ರಧಾನ ಗುರುಮೂರ್ತಿ ಮೇಣ ಸ್ವಾಗತಿಸಿ, ಪಳ್ಳತ್ತಡ್ಕ ವಲಯ ವಿದ್ಯಾರ್ಥಿ ವಾಹಿನಿ ವಿಭಾಗ ಪ್ರಧಾನ ಈಶ್ವರ ಭಟ್ ಸರ್ಪಂಗಳ ವಂದಿಸಿದರು.