ಮಧೂರು: ಮಧೂರು ಶ್ರೀಕ್ಷೇತ್ರದ ಇತಿಹಾಸದೊಂದಿಗೆ ಜೊತೆಯಾಗಿರುವ ಮದರು ಮಹಾಮಾತೆಯ ನೆಲೆಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ತರ ಹೊಸ ಶಖೆಯೊಂದು ತೆರೆದುಕೊಳ್ಳುತ್ತಿದ್ದು, ಮೂಲಸ್ಥಾನವಿರುವ ಉಳಿಯತ್ತಡ್ಕದ ಮದರು ಮಹಾಮಾತೆಯ ಸಾನ್ನಿಧ್ಯವಿದೆ ಎನ್ನಲಾಗುವ ಸ್ಥಳಕ್ಕೆ ಶನಿವಾರ ವಾಸ್ತುಶಿಲ್ಪಿಗಳ ಸಹಿತ ಉನ್ನತ ಗಣ್ಯ ಸಮಿತಿ ಭೇಟಿ ನಿಡಿ ಪರಿಶೀಲನೆ ನಡೆಸಿದೆ.
ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯದ ಜೀರ್ಣೋದ್ದಾರ ಪ್ರಕ್ರಿಯೆಗಳು ಕಳೆದ ಹಲವು ವರ್ಷಗಳಿಂದ ಕೈಗೆತ್ತಿಕೊಳ್ಳಲಾಗಿದ್ದು, ಮಂದಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಪ್ರಶ್ನಚಿಂತನೆಯಲ್ಲಿ ಕಂಡುಬಂದಂತೆ ಮೂಲಸ್ಥಾನದ ಮದರು ಮಹಾಮಾತೆಗೆ ಸಲ್ಲಬೇಕಾದ ಗೌರವಗಳೊಂದಿಗೆ ಅಭಿವೃದ್ದಿ ಚಟುವಟಿಕೆ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಇದರಂತೆ ಖ್ಯಾತ ಜ್ಯೋತಿಷ್ ಶಾಸ್ತ್ರಜ್ಞ ಪ್ರಸಾದ್ ಮಿನಿಯಂಗಳ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಧೂರು ಶ್ರೀಕ್ಷೇತ್ರದ ಜೀಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾರ್ಯದರ್ಶಿ ಮುರಳಿ ಗಟ್ಟಿ ಪರಕ್ಕಿಲ, ಮಧೂರು ಗ್ರಾ.ಪಂ.ಉಪಾಧ್ಯಕ್ಷ ದಿವಾಕರ ಆಚಾರ್ಯ, ಸದಸ್ಯ ಅವಿನ್ ಮಾಯಿಪ್ಪಾಡಿ ಮೊದಲಾದವರು ಭೇಟಿ ನೀಡಿದ ತಂಡದಲ್ಲಿದ್ದರು. ಮದರು ಮಹಾಮಾತೆ ಮೊಗೇರ ಸಮಿತಿ ಅಧ್ಯಕ್ಷ ವಸಂತ ಅಜಕ್ಕೋಡು, ಗೌರವಾಧ್ಯಕ್ಷ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಿ.ಕೃಷ್ಣದಾಸ್ ಮೊದಲಾದವರು ಮೂಲಸ್ಥಾನದ ಅಸ್ತಿತ್ವ ಮತ್ತು ಮದರು ಮಹಾಮಾತೆಯ ಬಗ್ಗೆ ಶಿಲ್ಪಿಗಳಿಗೆ ಮಾಹಿತಿ ನೀಡಿದರು. ಸಮಿತಿ ಪ್ರಮುಖರಾದ ಡಿ.ಶಂಕರ, ರಾಮಪ್ಪ ಮಂಜೇಶ್ವರ, ರಾಮ ಪಟ್ಟಾಜೆ, ನಿಟ್ಟೋಣಿ ಬಂದ್ಯೋಡು, ಸುಧಾಕರ ಬೆಳ್ಳಿಗೆ, ಸುಂದರ ಬಾರಡ್ಕ, ಗೋಪಾಲ ಡಿ., ವೇಣುಗೋಪಾಲ ಉಳಿಯ, ಚಂದ್ರ ನೀರ್ಚಾಲು, ಸುರೇಶ್ ಕೊಲ್ಯ, ಅನಿಲ್ ಅಜಕ್ಕೋಡು, ಸುಂದರ ಮಾಲಂಗಾಯಿ, ಸುಂದರ ಸುದೆಂಬಳ, ವಿಷ್ಣು ಕೊಲ್ಯ, ಜಯಾ ರಾಮಪ್ಪ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಕೆಲವು ಸಮಯಗಳಿಂದ ಮದರು ಮಹಾಮಾತೆ ಮೊಗೇರ ಸಮಿತಿಯು ಉಳಿಯದ ಮದರು ಮೂಲಸ್ಥಾನದ ಅಭಿವೃದ್ದಿಗಾಗಿ ಸಮಗ್ರ ರೀತಿಯಲ್ಲಿ ಒತ್ತಾಯಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ.ಭೇಟಿಯ ವೇಳೆ ಮಾತನಾಡಿದ ಶಿಲ್ಪಿಗಳು ಅತಿ ಶೀಘ್ರ ಮೂಲಸ್ಥಾನದ ಅಭಿವೃದ್ದಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.