ಬದಿಯಡ್ಕ: ಬದಿಯಡ್ಕದ ಶ್ರೀಅಯ್ಯಪ್ಪ ಸೇವಾ ಸಮಿತಿ ಆಶ್ರಯದಲ್ಲಿ ೫೬ನೇ ವರ್ಷದ ಶಬರಿಮಲೆ ಶ್ರೀಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವವು ಡಿ.೧೩ ಹಾಗೂ ೧೪ ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬದಿಯಡ್ಕ ಶ್ರೀಗಣೇಶ ಮಂದಿರದಲ್ಲಿ ನಡೆಯಲಿದೆ.
ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀಕಿನ್ನಿಮಾಣಿ-ಪೂಮಾಣಿಯಲ್ಲಿರುವ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಸಮಿತಿಯ ಗೌರವಾಧ್ಯಕ್ಷ ಚಂದ್ರಹಾಸ ರೈ ಪೆರಡಾಲಗುತ್ತು, ಅಧ್ಯಕ್ಷ ನರೇಂದ್ರ ಬದಿಯಡ್ಕ, ಮಂದಿರದ ಭಾಸ್ಕರ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ರಾಮಣ್ಣ ಗುರುಸ್ವಾಮಿ, ಸಿ.ಕೆ.ನಾರಾಯಣ ಗುರುಸ್ವಾಮಿ, ಕೃಷ್ಣ ಚುಳ್ಳಿಕ್ಕಾನ, ನಿರಂಜನ ರೈ ಪೆರಡಾಲ, ಜಯಂತಿ ಚೆಟ್ಟಿಯಾರ್, ಕುಮಾರನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗೋಕುಲ್ ಬದಿಯಡ್ಕ ಸ್ವಾಗತಿಸಿ, ಗುರುಪ್ರಸಾದ್ ವಂದಿಸಿದರು.