ಕಾಸರಗೋಡು: ಮಹಿಳೆಯರ ಸುರಕ್ಷತೆಗೆ ಮತ್ತಷ್ಟು ಖಾತ್ರಿ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಸರಗೋಡು ಒಳಗೊಂಡAತೆ ಹೊಸದಾಗಿ ನಾಲ್ಕು ಮಹಿಳಾ ಪೊಲೀಸ್ ಠಾಣೆ ತೆರೆಯಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಆದೇಶ ಜಾರಿಗೊಳಿಸಲಾಗಿದೆ. ಪತ್ತನಂತಿಟ್ಟ, ಇಡುಕ್ಕಿ, ಪಾಲಕ್ಕಾಡ್ ಮಹಿಳಾ ಪೊಲೀಸ್ ಠಾಣೆ ಆರಂಭಿಸುವ ಇತರ ಜಿಲ್ಲೆಗಳಾಗಿದೆ.
ಪ್ರತಿ ಠಾಣೆಯಲ್ಲಿ ೧೯ಹುದ್ದೆಗಳು ಒಳಗೊಂಡAತೆ ಒಟ್ಟು ೭೬ಮಂದಿ ಸಿಬ್ಬಂದಿ ನೇಮಕಗೊಳಿಸಬೇಕಾಗಿದೆ. ತಲಾ ಒಬ್ಬ ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಐದು ಮಂದು ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿಗಳು, ಹತ್ತು ಮಂದಿ ಸಿವಿಲ್ ಪೊಲೀಸ್ ಅಧಿಕಾರಿಗಳು, ಒಬ್ಬ ಚಾಲಕನ ಸಹಿತ ೧೯ಮಂದಿ ಸಿಬ್ಬಂದಿಯಿರಲಿದ್ದಾರೆ. ಜಿಲ್ಲೆಯ ವನಿತಾ ಸೆಲ್, ರಿಸರ್ವ್ ಹಾಗೂ ಬೆಟಾಲಿಯನ್ ವಿಭಾಗದಿಂದ ಇಲ್ಲಿಗೆ ಸಿಬ್ಬಂದಿ ನೇಂಕ ನಡೆಯಲಿದೆ. ಮಹಿಳಾ ಪೊಲೀಸ್ ಠಾಣೆ ಆರಂಭಿಸಲು ಸೂಕ್ತ ಕಟ್ಟಡ ಗೊತ್ತುಪಡಿಸಿ, ಸಜ್ಜುಗೊಳಿಸುವಂತೆ ರಾಜ್ಯ ಪೊಲೀಸ್ ಮಹಾ ನಿದೇಶಕ ಲೋಕನಾಥ್ ಬೆಹರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಸಕ್ತ ಜಿಲ್ಲೆಯಲ್ಲಿ ಹತ್ತು ಮಹಿಳಾ ಪೊಲೀಸ್ ಠಾಣೆಗಳಿದ್ದು, ನಾಲ್ಕು ಹೊಸ ಟಣೇಘಳು ಮಂಜೂರಾಗುವ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆ ಸೌಕರ್ಯ ಲಭ್ಯವಾಗಲಿದೆ.