ತಿರುವನಂತಪುರA: ಶಬರಿಮಲೆಗೆ ವಾರ್ಷಿಕ ಯಾತ್ರೆಯ ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ಕೇರಳದಲ್ಲಿ ರಾಜಕೀಯ ನಾಯಕರ ನಡುವಿನ ವಾಕ್ಸಮರ, ಸಲಹೆಗಳು ಪ್ರಾರಂಭವಾಗಿವೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಯುವತಿಯರು- ಮಹಿಳೆಯರ ಪ್ರವೇಶಕ್ಕೆ ಸಂಬAಧಿಸಿದAತೆ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಬಿಜೆಪಿಗೆ ಸಲಹೆ ನೀಡಿದ್ದಾರೆ.
ಬಿಜೆಪಿ ಶಾಸಕ ಒ ರಾಜಗೋಪಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸುರೇಂದ್ರನ್, ಕಳೆದ ಬಾರಿ ಶಬರಿಮಲೆಗೆ ಸಂಬAಧಿಸಿದAತೆ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಗೂಂಡಾಗಳು, ಸಮಾಜಘಾತುಕರನ್ನು ಶಬರಿಮಲೆಗೆ ಕಳಿಸಿದಂತೆ ಈ ಬಾರಿ ಮಾಡಬಾರದು ಎಂದು ಬಿಜೆಪಿಗೆ ಹೇಳಿದ್ದಾರೆ. ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ವಾರ್ಷಿಕ ಯಾತ್ರೆಗೆ ತೆರಳುವವರಿಗೆ ಕಲ್ಪಿಸಲಾಗುವ ಸೌಲಭ್ಯಗಳ ಕುರಿತು ರಾಜಗೋಪಾಲ್ ಸುರೇಂದ್ರನ್ ಅವರಿಂದ ಮಾಹಿತಿ ಕೇಳಿದ್ದರು. ಈ ವೇಳೆ ಕಳೆದ ಬಾರಿ ಕೇರಳ ಸರ್ಕಾರದ ಬೆಂಬಲದಿAದ ನಾಸ್ತಿಕರು, ಎಡಪಂಥೀಯ ಕಾರ್ಯಕರ್ತರು ಹಾಗೂ ಇತರರು ದೇವಾಲಯ ಪ್ರವೇಶಿಸಿದ್ದರು ಎಂದು ರಾಜಗೋಪಾಲ್ ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ವಿರುದ್ಧ ಆರೋಪ ಮಾಡಿದ ಸುರೇಂದ್ರನ್, ಕಳೆದ ಬಾರಿ ನೀವು ಸಮಾಜಘಾತುಕರು ಗೂಂಡಾಗಳನ್ನು ಉತ್ತೇಜಿಸಿದಂತೆ ಈ ಬಾರಿ ಮಾಡಬೇಡಿ, ಅಯೋಧ್ಯೆ ತೀರ್ಪನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಿದ್ದೀರಿ, ಶಬರಿಮಲೆ ವಿಷಯದಲ್ಲಿನ ಕೋರ್ಟ್ ತೀರ್ಪನ್ನೂ ಇದೇ ರೀತಿ ಸ್ವಾಗತಿಸಿ ಎಂದು ಹೇಳಿದ್ದಾರೆ.