ಬದಿಯಡ್ಕ: ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣ ಯಜ್ಞದ ಭಾಗವಾದ ವಿದ್ಯಾಲಯಗಳು ಪ್ರತಿಭೆಗಳೆಡೆಗೆ ಎಂಬ ಕಾರ್ಯಕ್ರಮದ ಆಂಗವಾಗಿ ಸಂತ ಬಾರ್ಥಲೋಮೆಯ ಹಿರಿಯ ಬುನಾದಿ ಶಾಲೆ ಬೇಳದ ವಿದ್ಯಾರ್ಥಿ ಗಳು ಮಕ್ಕಳ ದಿನವಾದ ನವೆಂಬರ್ 14 ರಂದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಉದ್ಯೋಗಿಯಾಗಿದ್ದ ವಿಕ್ಟರ್ ಮೊಂತೇರೊ ಸೀತಾಂಗೋಳಿ ರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸಂದರ್ಶನ ನಡೆಸಿ ಇಸ್ರೋದ ಕುರಿತು ಮಾಹಿತಿ ಸಂಗ್ರಹಿದರು. ಜೊತೆಗೆ ಅವರ ಸಾಧನೆಗಾಗಿ ಗೌರವಿಸಿದರು. ತಾವೂ ಸಾಧನೆಗಳನ್ನು ಮಾಡಲು ಆಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ನಿವೇದಿತಾ, ಶಿಕ್ಷಕರಾದ ಸ್ಟಾನಿ ಲೋಬೊ ಕೊಲ್ಲಂಗಾನ, ವಿನೋದ್ ಕ್ರಾಸ್ತ ಬೇಳ ಜೊತೆಗಿದ್ದರು.
ಬೇಳ ಶಾಲಾ ವಿದ್ಯಾರ್ಥಿಗಳಿಂದ ಸಾಧಕರ ಸಂದರ್ಶನ
0
ನವೆಂಬರ್ 15, 2019