ಕಾಸರಗೋಡು: ಹರಿತ ಕೇರಳಂ ಮಿಷನ್‌ನ `ಪಚ್ಚ ತುರುತ್ (ಹಸುರು ದ್ವೀಪ)' ಯೋಜನೆ ಪುಂಡೂರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊAಡಿದೆ. ಪರಿಸರವಾದಿ ದಿವಾಕರ ಕಡಿಂಜಿಮೂಲೆ ಅವರ `ಗೃಹವನ" ಯೋಜನೆಯ ಸಹಕಾರದೊಂದಿಗೆ ಈ ಯೋಜನೆಗೆ ಚಾಲನೆ ಲಭಿಸಿದೆ. ಪ್ರಕೃತಿ ಸಂರಕ್ಷಣೆಯ ಅಂಗವಾಗಿ ಶಾಲೆಯ ೪೦ ಸೆಂಟ್ಸ್ ಜಾಗದಲ್ಲಿ ವಿದ್ಯಾರ್ಥಿಗಳು ಈ ಮೂಲಕ ಹಸುರೀಕರಣ ಚಟುವಟಿಕೆ ನಡೆಸಲಿದ್ದಾರೆ.
ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ ಆಲದ ಸಸಿ ನೆಡುವ ಮೂಲಕ ಯೋಜನೆ ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಸಿಂಧು ಪೈಕ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಅಹಮ್ಮದ್ ಹಾಜಿ, ಮುಖ್ಯ ಶಿಕ್ಷಕ ಎ.ಸಿ.ವಿನೋದ್, ಬೆಂಬಲ ಸಮುಹ ಅಧ್ಯಕ್ಷ ಎಂ.ದೇವಾನAದ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಮ ರಾವ್, ವಿ.ರಾಜಶ್ರೀ, ಯು.ವಂದನಾ, ರಕ್ಷಕ-ಶಿಕ್ಷಕ ಸಂಘದ ಪದಾಽಕಾರಿಗಳು, ಸದಸ್ಯರು, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು ಮೊದಲಾದವರು ಉಪಸ್ಥಿತರಿದ್ದರು.