ಬದಿಯಡ್ಕ: ಮನುಷ್ಯನ ಸೌಂದರ್ಯಕ್ಕೆ ಪ್ರಧಾನ ಕಾರಣವಾದ ದಂತವನ್ನು ಸಂರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಹಲ್ಲು ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯನಿಗೆ ನೆಮ್ಮದಿಯಿರಲು ಸಾಧ್ಯ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ, ಜಿಲ್ಲಾ ಆರೋಗ್ಯಕೇಂದ್ರ, ಬದಿಯಡ್ಕ ಸಮುದಾಯ ಆರೋಗ್ಯಕೇಂದ್ರದ ನೇತೃತ್ವದಲ್ಲಿ ಶನಿವಾರ ಪೆರಡಾಲ ಕೊರಗ ಕಾಲನಿಯಲ್ಲಿರುವ ಎಂ.ಜಿ.ಎಲ್.ಸಿ. ಶಾಲೆಯಲ್ಲಿ ಜರಗಿದ ದಂತರೋಗ ನಿರ್ಣಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಲ್ಲಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ನೀಡಿದರೆ ಮಾತ್ರ ದೀರ್ಘಕಾಲ ಹಲ್ಲು ಉಳಿಯಬಹುದು. ಸ್ವಚ್ಛತೆಯ ಬಗ್ಗೆಯೂ ನಾವು ಎಚ್ಚೆತ್ತುಕೊಂಡು ಮುಂದುವರಿಯಬೇಕು ಎಂದರು ಅವರು ತಿಳಿಸಿದರು.
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಗ್ರಾಮಪಂಚಾಯಿತಿ ಸದಸ್ಯೆ ಶಾಂತಾ ಬಾರಡ್ಕ, ಎಂ.ಜಿ.ಎಲ್.ಸಿ.ಶಾಲೆಯ ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ ಮಾತನಾಡಿದರು. ಬದಿಯಡ್ಕ ಸಮುದಾಯ ಆರೋಗ್ಯಕೇಂದ್ರ ಪ್ರಧಾನ ವೈದ್ಯಾಧಿಕಾರಿ ಸತ್ಯಶಂಕರ ಭಟ್ ಸ್ವಾಗತಿಸಿ, ಆರೋಗ್ಯ ಅಧಿಕಾರಿ ವಿನೋದ್ ವಂದಿಸಿದರು. ದಂತ ವೈದ್ಯ ಡಾ. ಸಜಿತ್ ಹಾಗೂ ತಂಡದವರು ದಂತ ತಪಾಸಣೆ ಮಾಡಿದರು. ಆರೋಗ್ಯ ಇಲಾಖೆಯ ದೇವಿದಾಕ್ಷನ್, ಆಶಾಕಾರ್ಯಕರ್ತೆಯರು, ಪ್ರಮೋಟರ್‍ಗಳು ಹಾಗೂ ಕಾಲನಿ ವಾಸಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.