HEALTH TIPS

ಗೋಮಾತಾ ಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ

      ಪೆರ್ಲ: ಮುಳ್ಳೇರಿಯಾ ಮಂಡಲಾAತರ್ಗತ ಎಣ್ಮಕಜೆ ವಲಯದಲ್ಲಿರುವ ಶ್ರೀರಾಮಚಂದ್ರಾಪುರಮಠದ ಅಂಗಸAಸ್ಥೆಯಾದ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಅ.೨೮ ರಿಂದ ಆರಂಭಗೊAಡಿದ್ದ (ಕಾರ್ತಿಕ ಶು.ಪಾಡ್ಯದಿಂದ ಅಷ್ಟಮಿಯವರೆಗೆ) ಗೋಮಾತಾ ಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ  ಪ್ರತಿವರ್ಷದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು.
       ಪ್ರತಿದಿನ ಸಂಜೆ ೪.೩೦ ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯ ನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲAಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ,ಭಜನೆ ಹಾಗೂ ದೀಪೋತ್ಸವ ನಡೆಯಿತು.
    ಕಾರ್ತಿಕ ಶುಕ್ಲ ಅಷ್ಟಮಿಯಂದು ಸೋಮವಾರ ಭಗವಾನ್ ಗೋಪಾಲಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಗೋಕುಲವನ್ನು ಸಂರಕ್ಷಿಸಿದ ಈ ಪರ್ವಕಾಲದಲ್ಲಿ ಗೋಪಾಷ್ಟಮೀ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಬೆಳಿಗ್ಗೆ ೭. ರಿಂದ ಗುರುವಂದನೆ, ಕಾರ್ತಿಕ ಸೋಮವಾರದ ಪ್ರಯುಕ್ತ ಶತರುದ್ರಾಭಿಷೇಕ ಶಿವಪೂಜೆ, ಗೋಪೂಜೆ, ಸ್ತೋತ್ರಪಾರಾಯಣಗಳು, ಗಣಪತಿಹವನ, ನವಗ್ರಹಶಾಂತಿ, ಗೋವರ್ಧನಹವನ, ಕಾಮಧೇನುಹವನ, ಗೋಪಾಲಕೃಷ್ಣಹವನಗಳು ನಡೆದವು. ಮಾತೆಯರು ಕುಂಕುಮಾರ್ಚನೆ, ಭಜನೆ ನಡೆಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
      ಸಂಜೆ ೪. ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲAಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ, ಭಜನೆ ಹಾಗೂ ದೀಪೋತ್ಸವ ನಡೆಯಿತು. ಮಹಾಮಂಗಳಾರತಿಯ ಸಂದರ್ಭದಲ್ಲಿ ಗೋವರ್ಧನ ಗೋಪಾಲಕೃಷ್ಣ ದೇವರಿಗೆ ಅಷ್ಟಾವಧಾನ ಸೇವೆ ನಡೆಯಿತು. ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries