ಕಾಸರಗೋಡು: ರಾಜ್ಯ ಮಟ್ಟದ ಶಾಲಾ ಕಲೋತ್ಸವ ಡಿ.28ರಿಂದ ಜ.1 ವರೆಗೆ ಕಾಞಂಗಾಡಿನಲ್ಲಿ ಜರುಗಲಿದೆ. ಜಿಲ್ಲೆಯಲ್ಲಿ ಈ ಮೂಲಕ ಎರಡನೇ ಬಾರಿ ರಾಜ್ಯ ಮಟ್ಟದ ಶಾಲಾ ಕಲೋತ್ಸವ ನಡೆಯುತ್ತಿದೆ. ಇದೇ ವೇಳೆ ಅಂದಿನ ಪರಿಸ್ಥಿತಿ ಮತ್ತು ಇಂದಿನ ಸ್ಥಿತಿಗತಿಗಳಲ್ಲಿ ಅನೇಕ ವ್ಯತ್ಯಾಸಗಳನ್ನು ಗಣಿಸಲಾಗುತ್ತಿದೆ.
ಜಿಲ್ಲೆ ರಚನೆಗೊಂಡ ಹಿನ್ನೆಲೆ ಗಣಿಸಿದರೆ ಈ ಕಲೋತ್ಸವ ಪ್ರಥಮ ಬಾರಿಗೆ ನಡೆದುದು, ಸ್ವತಂತ್ರ ಜಿಲ್ಲೆಗೆ 7 ವರ್ಷವಷ್ಟೇ ಆಗಿದ್ದಾಗ ಎಂಬುದು ಗಮನಾರ್ಹ ವಿಚಾರ. ಈ ಹಿಂದೆ 1991ರಲ್ಲಿ ಕಲೋತ್ಸವ ನಡೆದಿತ್ತು. ಅಂದರೆ 28 ವರ್ಷಗಳ ನಂತರ ಮತ್ತೆ ಈ ಕಲಾಹಬ್ಬ ಗಡಿನಾಡ ಮಣ್ಣಿನಲ್ಲಿ ತೆರೆದುಕೊಳ್ಳುತ್ತಿದೆ. ನಮಗೆ ಅತಿಥೇಯರಾಗುವ ಭಾಗ್ಯವನ್ನೂ ಒದಗಿಸುತ್ತಿದೆ.
ಈ ಬಾರಿ ಕಾಞಂಗಾಡ್, ನೀಲೇಶ್ವರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಸೇರಿದಂತೆ 28 ವೇದಿಕೆಗಳಲ್ಲಿ ಕಲಾಸ್ಪರ್ಧೆಗಳು ನಡೆಯಲಿವೆ.1991ರಲ್ಲಿ 5ವೇದಿಕೆಗಳಲ್ಲಿ ಸ್ಪರ್ಧೆ ನಡೆದಿದ್ದುವು. ಕಾಸರಗೋಡು ತಾಳಿಪಡ್ಪು ಮೈದಾನ ಪ್ರಧಾನ ವೇದಿಕೆಯಾಗಿತ್ತು. ಕಾಸರಗೋಡು ಸರಕಾರಿ ಪ್ರೌಢಶಾಲೆ, ಲಲಿತ ಕಲಾಸದನ, ಚಿನ್ಮಯಾ ಮಿಷನ್ ಸಭಾಂಗಣ, ಕಾಸರಗೋಡು ಸರಕಾರಿ ಕಾಲೇಜುಗಳು ಇತರ ವೇದಿಕೆಗಳಾಗಿದ್ದುವು. ಸುಮಾರು 3 ಸಾವಿರ ಸ್ಪರ್ಧಾಳುಗಳು ಅಂದು ಭಾಗವಹಿಸಿದ್ದರು. 68 ವಿಧ ಕಲಾಪ್ರಕಾರಗಳ ಸ್ಪರ್ಧೆಗಳು ಜರುಗಿದ್ದುವು. ಆದರೆ ಇಂದು 240ಕ್ಕೂ ಅಧಿಕ ಕಲಾಪ್ರಕಾರಗಳಲ್ಲಿ ಸ್ಪರ್ಧೆ ನಡೆಯಲಿದ್ದು, 13 ಸಾವಿರ ಮಂದಿ ಸ್ಪರ್ಧಾಳುಗಳು ಭಾಗಿಗಳಾಗುವರು.
ಅಂದಿನ ಮೆರವಣಿಗೆ :
1991ರಲ್ಲಿ ಕಲೋತ್ಸವದ ಅಂಗವಾಗಿ ನಡೆದಿದ್ದ ವರ್ಣರಂಜಿತ ಮೆರವಣಿಗೆ ಅನೇಕ ಮಂದಿಯ ಮನದಲ್ಲಿ ಹಸುರಾಗಿದೆ. ವಿದ್ಯಾನಗರದಿಂದ ತಾಳಿಪಡ್ಪು ಮೈದಾನದ ವರೆಗೆ ಬೃಹತ್ ಮೆರವಣಿಗೆ ಜರುಗಿತ್ತು. ಅಂದಿನ ಜಿಲ್ಲಧಿಕಾರಿ ಜೆ.ಸುಧಾಕರನ್ ಅವರು ಮೆರವಣಿಗೆಗೆ ಹಸುರು ನಿಶಾನೆ ತೋರಿದ್ದರು ಎಂದು ಅಂದಿನ ಕಲೋತ್ಸವ ಕಾರ್ಯಕ್ರಮದ ಸಂಚಾಲಕರಾಗಿದ್ದ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಪಿ.ಶ್ರೀಧರನ್ ನೆನಪಿಸಿಕೊಳ್ಳುತ್ತಾರೆ.
1991ರ ಕಲೋತ್ಸವದ ಭೋಜನಾಲಯ ತಾಳಿಪಡ್ಪು ಮೈದಾನದ ವೇದಿಕೆಯ ಆಸುಪಾಸಿನಲ್ಲೇ ಇತ್ತು. ಇಂದು ಪರಿಸ್ಥಿತಿ ಬದಲಾಗಿರುವ ಹಿನ್ನೆಲೆಯಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಕಲಾ ಕಾರಂಜಿ ಇಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಏರ್ಪಿಸಲಾಗುತ್ತಿದೆ. 1500ಕ್ಕೂ ಮಿಕ್ಕು ಪತ್ರಕರ್ತರು ವಾರ್ತಾ ಸಂಗ್ರಹಕ್ಕೆ ಸಿದ್ಧತೆ ನಡೆಸಿ ಕಾಞಂಗಾಡಿನಲ್ಲಿ ಆ ದಿನಗಳಲ್ಲಿ ಠಿಕಾಣಿ ಹೂಡಲಿದ್ದಾರೆ.
ಕಲೋತ್ಸವ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿದ್ದು, ಉತ್ಸಾಹ ಎಲ್ಲೆಡೆ ಕಂಡುಬರುತ್ತಿದೆ. 1991ರ ಕಲೋತ್ಸವ ವೇಳೆ ಅತಿಥಿ ಸತ್ಕಾರದಲ್ಲಿ ಅತ್ಯುತ್ತಮವಾಗಿದ್ದ ಕಾಸರಗೋಡು ಜಿಲ್ಲೆ, ಈ ಬಾರಿಯೂ ಹಲವು ಪಟ್ಟು ಅಧಿಕ ವ್ಯವಸ್ಥೆಯೊಂದಿಗೆ ಇವರನ್ನು ಎದುರುಗೊಳ್ಳಲಿದೆ.