ಮಂಜೇಶ್ವರ : ಪ್ರವಾದಿ ಮುಹಮ್ಮದ್ (ಸ.ಅ )ಅವರ ಜನ್ಮ ದಿನವನ್ನು ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲೇ ಅತ್ಯಧಿಕ ಮೊಹಲ್ಲಾ ಮದ್ರಸಾ ವಿದ್ಯಾರ್ಥಿಗಳಿರುವ ಉದ್ಯಾವರ ಸಾವಿರ ಜಮಾಅÀತ್ ಖಿದ್ಮತುಲ್ ಇಸ್ಲಾಮ್ ಸಮಿತಿ ವತಿಯಿಂದ ಭಾನುವಾರ ಸಂಭ್ರಮದಿAದ ಆಚರಿಸಲಾಯಿತು.
ಜಮಾಅತ್ ವ್ಯಾಪ್ತಿಯಲ್ಲಿರುವ ಹದಿಮೂರು ಮೊಹಲ್ಲಾಗಳ ಸುತ್ತಮುತ್ತಲಿನ ಪ್ರದೇಶವನ್ನು ಅಲಂಕರಿಸಲಾಗಿದ್ದು, ಉದ್ಯಾವರ ಸಾವಿರ ಜಮಾಅತ್ ಆವರಣದಲ್ಲಿ ಎಲ್ಲಾ ಮೊಹಲ್ಲಾದ ಮಕ್ಕಳಿಗೆ ಸಾಹಿತ್ಯ ಮತ್ತು ಸಾಂಸ್ಕöÈತಿಕ ಸಹಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹದಿಮೂರು ಮೊಹಲ್ಲಾಗಳ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಹಾಗು ಪೋಷಕರು ಕಾಲ್ನಡಿಗೆಯೊಂದಿಗೆ ಮೀಲಾದ್ ಮೆರವಣಿಗೆ ನಡೆಸಿದರು.
ಎಲ್ಲಾ ಮೊಹಲ್ಲಾಗಳ ವಿದ್ಯಾರ್ಥಿಗಳು ಉದ್ಯಾವರ ಜಮಾಅತ್ ಆವರಣದಲ್ಲಿ ಬೆಳಿಗ್ಗೆಯೇ ಸೇರಿ ಮಂಜೇಶ್ವರ, ಉದ್ಯಾವರ , ರಾ. ಹೆದ್ದಾರಿಗಳಲ್ಲಿ ಸಾಗಿ ಕುಂಜತ್ತೂರು ತನಕ ಮಿಲಾದ್ ಮೆರವಣಿಗೆ ನಡೆಸಿದರು. ಜಮಾಅತ್ ಅಧ್ಯಕ್ಷ ಸೂಫಿ ಹಾಜಿ, ಕಾರ್ಯದರ್ಶಿ ಮೊಯ್ದಿನ್ ಹಾಜಿ, ಭಾವ ಹಾಜಿ, ಅಬೂಬಕ್ಕರ್ ಮಾಹಿನ್ ಹಾಜಿ, ಇಬ್ರಾಹಿಂ ಬಟರ್ ಫ್ಲೆöÊ ಮದ್ರಸಗಳ ಮುಅಲ್ಲಿಮರು, ಮಸೀದಿ, ಮದ್ರಸಗಳ ಆಡಳಿತ ಸಮಿತಿಯ ಪದಾಧಿಕಾರಿಗಳು ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.