ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ವರ್ಕಾಡಿ ಸಮಿತಿಯ ಆಶ್ರಯದಲ್ಲಿ ಸಂವಿಧಾನ ಸಂರಕ್ಷಣಾ ಸಭೆ ಇಂದು(ನ.17) ಅಪರಾಹ್ನ 3 ರಿಂದ ವರ್ಕಾಡಿಯ ಶ್ರೀವಾಣೀ ವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ನಡೆಯಲಿದೆ.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಉದ್ಘಾಟಿಸುವರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ನ್ಯಾಯವಾದಿ ರಾಧಾಕೃಷ್ಣ ಪೆರುಂಬಳ ಹಾಗೂ ವನಿತಾ ಆರ.ಶೆಟ್ಟಿ ವಿಷಯ ಮಂಡನೆ ನಡೆಸುವರು. ಗೀತಾ ಸಾಮಾನಿ, ಗೋಪಾಲಕೃಷ್ಣ ಪಜ್ವ, ಭಾರತೀ ನಡಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿಜಯಕುಮಾರ್ ಪಾವಳ, ಎ.ಬಿ.ರಾಧಾಕೃಷ್ಣ ಬಲ್ಲಾಳ್, ರವೀಂದ್ರ ಸುಳ್ಯಮೆ, ಅಶೋಕ ಮಾಸ್ತರ್ ಕೊಡ್ಲಮೊಗರು, ರಾಮಕೃಷ್ಣ ಭಟ್, ಪುಷ್ಪಲತಾ ಕತ್ತರಿಕೋಡಿ, ಅಕ್ಷಯಕುಮಾರ್ ಎಲಿಯಾಣ ಚರ್ಚೆಯಲ್ಲಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.