ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜು ಗಣಿತ ಶಾಸ್ತ್ರ ವಿಭಾಗ ಮತ್ತು ಕೇರಳ ಸ್ಕೂಲ್ ಆಫ್ ಮ್ಯಾತಮೆಟಿಕ್ಸ್‍ನ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ಗಣಿತ ಶಾಸ್ತ್ರ ಪದವಿ ವಿದ್ಯಾರ್ಥಿಗಳಿಗಾಗಿ ನಾಲ್ಕು ದಿನಗಳ ಗಣಿತ ಶಾಸ್ತ್ರ ಕಾರ್ಯಾಗಾರ ಆರಂಭಗೊಂಡಿತು.
ಕಲ್ಲಿಕೋಟೆ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ನಿವೃತ್ತ ಪೆÇ್ರ.ಎಂ.ಎಸ್.ಬಾಲಸುಬ್ರಹ್ಮಣಿ ಉದ್ಘಾಟಿಸಿದರು. ಕಾಲೇಜು ಸೆಮಿನಾರ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎ.ಎಲ್.ಅನಂತಪದ್ಮನಾಭ ಅಧ್ಯಕ್ಷತೆ ವಹಿಸಿದರು.
ಪೆÇ್ರ.ಎಂ.ಎಸ್.ಬಾಲಸುಬ್ರಹ್ಮಣಿ, ಪೆÇ್ರ.ಎ.ಜೆ.ಜಯಂತನ್, ಡಾ|ಎಂ.ಕುಂಞõÁನಂದನ್, ಡಾ.ಮುರಳೀಕೃಷ್ಣನ್ ಕೆ, ಡಾ.ಆಲಿ ಅಕ್ಬರ್ ಕೆ, ಡಾ.ಅಖಿಲೇಶ್ ಪಿ, ಡಾ.ವಿ.ಬಿ.ಕಿರಣ್ ಕುಮಾರ್ ಕಾರ್ಯಾಗಾರ ನಡೆಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಕಾರಿ ಕಾಲೇಜು ಉಪ ಪ್ರಾಂಶುಪಾಲ ಡಾ.ರಮಾ ಎಂ, ಡಾ.ಜೀಜೋ ಪಿ.ಯು, ಡಾ.ಅಖಿಲೇಶ್ ಪಿ, ಡಾ.ಮುಬೀನ್ ಟಿ, ಆಯಿಷತ್ ಫಾಸ್ನ ಟಿ.ಪಿ, ದರ್ಶನ್ ಮೊದಲಾದವರು ಮಾತನಾಡಿದರು.