ಬದಿಯಡ್ಕ: ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಎಲ್‍ಎಸ್‍ಎಸ್ ಹಾಗೂ ಯುಎಸ್‍ಎಸ್ ಪರೀಕ್ಷಾ ತರಬೇತಿಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದೆ. ತರಬೇತಿಯು ಬದಿಯಡ್ಕದಲ್ಲಿ ಜನವರಿ 11, 12ರಂದು ನಡೆಯಲಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ನಿರ್ವಹಿಸಲಿದ್ದಾರೆ. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಎಲ್‍ಎಸ್‍ಎಸ್, ಯುಎಸ್‍ಎಸ್ ಪರೀಕ್ಷೆ ಎದುರಿಸಲಿರುವ ಕಾಸರಗೋಡಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 7259846266 ಅಥವಾ 9900638006ನ್ನು ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಎಲ್ ಎಸ್ ಎಸ್, ಯು ಎಸ್ ಎಸ್ ತರಬೇತಿ
0
ನವೆಂಬರ್ 24, 2019