ಕಾಸರಗೋಡು: ಆಡಳಿತೆ ಭಾಷಾ ಸಪ್ತಾಹ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ಕಚೇರಿ ಮತ್ತು ಜಿಲ್ಲಾ ಯೋಜನೆ ಕಚೇರಿ ವತಿಯಿಂದ ಸರ್ಕಾರಿ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ಜರಗಿತು.
ಜಿಲ್ಲಾ ಯೋಜನೆ ಅಽಕಾರಿ ಎಸ್.ಸತ್ಯಪ್ರಕಾಶ್ ಅವರ ನೇತೃತ್ವದಲ್ಲಿ ಸ್ಪರ್ಧೆ ನಡೆದಿತ್ತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಲ್ಲಿ ಪ್ರಶ್ನೆ ಮುಂದಿಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಸ್ಪರ್ಧೆಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಪಿ.ವಿನೋದ್ ಕುಮಾರ್ ಪ್ರಥಮ ಬಹುಮಾನ ಗಳಿಸಿದರು. ಶಿಕ್ಷಣ ಇಲಾಖೆಯ ಸಿಬ್ಬಂದಿ ಕೆ.ಅನಿಲ್ ಕುಮಾರ್ ದ್ವಿತೀಯ, ಎ.ಡಿ.ಸಿ.ಕಚೇರಿಯ ಸಿಬ್ಬಂದಿ ಶುಭಶ್ರೀ ತೃತೀಯ ಬಹುಮಾನ ಪಡೆದರು. ಹಾಜಿ ಅಬ್ದುಲ್ ಗಫೂರ್, ಅನೀಟ್ಟಾ ಜಾನ್ ಪ್ಲಾತ್ತೋಟ್ಟಂ, ಕೆ.ಪಿ.ಶರತ್, ಅನೀಷ್ ಮೊದಲಾದವರು ಸಹಕರಿಸಿದರು.