ಕಾಸರಗೋಡು: ಜಿಲ್ಲಾದ್ಯಂತ ಈದ್‌ಮಿಲಾದ್ ಹಬ್ಬವನ್ನು ಭಕ್ತಿಸಂಭ್ರಮದಿAದ ಭಾನುವಾರ ಆಚರಿಸಲಾಯಿತು. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಜಿಲ್ಲೆಯ ಐದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಈದ್‌ಮಿಲಾದ್ ಹಬ್ಬ ಆಚರಣೆಗಾಗಿ ಜಿಲ್ಲಾಡಳಿತ ಷರತ್ತು¨ದ್ಧ ಅನುಮತಿ ಮಂಜೂರುಗೊಳಿಸಿತ್ತು.
ಪ್ರವಾದಿ ಮಹಮ್ಮದ್ ನಬಿ ಅವರ ಜನ್ಮದಿನಾಚರಣೆ ಅಂಗವಾಗಿ ಈದ್‌ಮಿಲಾದ್ ಆಚರಿಸಲಾಗುತ್ತಿದ್ದು, ನಾಡಿನಾದ್ಯಂತ ಪ್ರವಾದಿ ನಬಿ ಅವರ ಸಂದೇಶ ಸಾರುವ ಮೆರವಣಿಗೆ, ಪ್ರವಚನ ಆಯೋಜಿಸಲಾಗಿತ್ತು. ಮಸೀದಿ ಸಮಿತಿ, ಮದ್ರಸಾ ಸಮಿತಿಗಳಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಳಂಗರೆ ಮಾಲಿಕ್‌ದೀನಾರ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾಮಸೀದಿ, ದೇಳಿ ಸಅದಿಯಾ ಸಹಿತ ನಾನಾ ಕಡೆ ಮಸೀದಿ, ಮದ್ರಸಾ ಸಮಿತಿಳ ವತಿಯಿಂದ ದಫ್‌ಮುಟ್, ಮೆರವಣಿಗೆ, ಮದ್ರಸಾ ವಿದ್ಯಾರ್ಥಿಗಳಿಗಾಗಿ ವಇವಿಧ ಸ್ಪರ್ಧೆಗಳು ಜರುಗಿತು.
ಜಿಲ್ಲೆಯ ಮಂಜೇಶ್ವರ, ಕುಂಬಳೆ, ಕಾಸರಗೋಡು, ಹೊಸದುರ್ಗ ಹಾಗೂ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈದ್‌ಮಿಲಾದ್ ಮೆರವಣಿಗೆಗೆ ಪ್ರತ್ಯೇಕ ಅನುಮತಿ ಕಲ್ಪಿಸುವಂತೆ ನಾನಾ ಸಂಘಟನೆಗಳು ಬೇಡಿಕೆ ಮುಂದಿರಿಸಿದ್ದು, ಪ್ರಚೋದನಾಕಾರಿ ಘೋಷಣೆ, ಭಾಷಣ ನಡೆಸದೆ, ಕಾಲ್ನಡೆ ರ‍್ಯಾಲಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಮೆರವಣಿಗೆ ಸಂದರ್ಭ ಬೈಕ್, ಕಾರ್ ರ‍್ಯಾಲಿ ಏರ್ಪಡಿಸದಿರುವುದು, ರ‍್ಯಾಲಿಯಲ್ಲಿ ಪಾಳ್ಗೊಳ್ಳುವ ಪುರುಷರು ಮುಖ ಮುಚ್ಚಿಕೊಳ್ಳುವ ರೀತಿಯಲ್ಲಿ ಮುಖವಾಡ, ಟವೆಲ್ ಸುತ್ತಿಕೊಳ್ಳದಿರುವಂತೆಯೂ ಸೂಚಿಸಲಾಗಿತ್ತು. ಜಿಲ್ಲಾದ್ಯಂತ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು.
ಚಿತ್ರ ಮಾಹಿತಿ:ತಳಂಗರೆ ಮಾಲಿಕ್‌ದೀನಾರ್ ಮದ್ರಸಾ ಸಮಿತಿ ಮಕ್ಕಳಿಂದ ಆಕರ್ಷಕ ದಫ್ ಮುಟ್, ಮೆರವಣಿಗೆ.