ಕುಂಬಳೆ: ಮಂಗಳೂರು ಶ್ರೀಕೃಷ್ಣ ಯಕ್ಷಸಭಾ ವತಿಯಿಂದ ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಅ.೩೦ರಿಂದ ನ.೫ರ ತನಕ ನಡೆದ ೧೮ನೇವರ್ಷದ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಮುನ್ನಡೆಸುತ್ತಾ, ಅದರ ಪ್ರಧಾನ ಸಂಪಾದಕರಾಗಿ ಯಕ್ಷಗಾನದ ಅಮೂಲ್ಯ ದಾಖಲಾತಿಗಳನ್ನು ದಾಖಲಿಸುತ್ತಾ ಕಲೆಗೆ ಅನನ್ಯ ಕೊಡುಗೆ ನೀಡುತ್ತಿರುವುದನ್ನು ಶ್ಲಾಘಿಸಿ ಸನ್ಮಾನ ಗೌರವ ನೀಡಲಾಯಿತು.
ಹಿರಿಯ ಕಲಾವಿದ ಕುಂಬಳೆ ಸುಂದರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಪ್ತಾಹ ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮದಲ್ಲಿ ನಡೆದ ಸನ್ಮಾನದಲ್ಲಿ ಶ್ರೀಕೃಷ್ಣ ಯಕ್ಷಸಭಾದ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ವಾಸುದೇವರಾವ್ ಕುಡುಪು, ಕ.ಸಾ.ಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ.ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕಲಾವಿದ ರವಿ ಅಲೆವೂರಾಯ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.