ಮಂಜೇಶ್ವರ: ಮುಡೂರು ತೋಕೆಯ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ವಿಜಯ ಕಾರ್ಯಕ್ರಮದ ಉದ್ಘಾಟನೆ ಹಾಗೂ ರಕ್ಷಕರಿಗೆ ಮಾಹಿತಿ ಶಿಬಿರವು ಮಕ್ಕಳ ದಿನಾಚರಣೆಯಂದು ಜರಗಿತು.
ಮಂಜೇಶ್ವರ ಬಿ ಆರ್ ಸಿ ಯ ಯೋಜನಾಧಿಕಾರಿ ಗುರುಪ್ರಸಾದ್ ರೈ ಅವರು ಗಣಿತ ವಿಜಯದ ಕಿಟ್ ನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಅವರಿಗೆ ಹಸ್ತಾಂತರಿಸಿ ಔಪಚಾರಿಕ ವಾಗಿ ಉದ್ಘಾಟಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳ ರಕ್ಷಕರಿಗೆ ಮಹಿತಿ ಶಿಬಿರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ದೇವಪ್ಪ ಶೆಟ್ಟಿ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ಶಿಕ್ಷಕಿ ಫೌಸಿಯ ವಂದಿಸಿದರು. ಶಿಕ್ಷಕಿ ಲಾವಣ್ಯ ನಿರೂಪಿಸಿದರು.