HEALTH TIPS

ವಾಚಾಳಿಯಾಗದೆ ವಾಚ್ಯವಾಗಿರುವುದೇ ಕಾವ್ಯ-ಡಾ.ರಾಧಾಕೃಷ್ಣ ಬೆಳ್ಳೂರು-ಗಡಿನಾಡ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅಭಿಮತ

         
      ಕಾಸರಗೋಡು: ಜಗತ್ತಿನ ಪ್ರತಿಯೊಂದು ಸೃಷ್ಟಿಗೂ ಧ್ಯಾನಾವಸ್ಥ ಸ್ಥಿತಿಯಿದೆ. ಇಂತಹ ಧ್ಯಾನಾವಸ್ಥೆಯ ಅಂತರಂಗದಿಂದ ಕಾವ್ಯ ಸೃಜಿಸಲ್ಪಡುತ್ತದೆ. ಗಂಗೆಯೋಪಾದಿಯಲ್ಲಿ ಚಲಿಸುವ ಕಾವ್ಯ ವಾಚಾಳಿಯಾಗಿರದೆ ವಾಚ್ಯವಾಗಿರಬೇಕು ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಸಂಶೋಧಕ ಡಾ.ರಾಧಾಕೃಷ್ಣ ಬೆಳ್ಳೂರು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
    ಸಾಂಸ್ಕøತಿಕ, ಜಾನಪದ, ಸಾಹಿತ್ತಿಕ ಕಾರ್ಯಕ್ರಮಗಳ ಮೂಲಕ ಸದಾ ಕ್ರಿಯಾಶೀಲವಾಗಿ, ಗಡಿನಾಡಿನ ಜನಮಾನಸದಲ್ಲಿ ಅಚ್ಚಳಿಯದ ಶ್ಲಾಘನೀಯ ಚಟುವಟಿಕೆಗಳನ್ನು ನಡೆಸುತ್ತಿರುವ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಹಾಗೂ ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಜಂಟಿ ಆಶ್ರಯದಲ್ಲಿ ಶನಿವಾರ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕವಿತೆ ಎಂದಿಗೂ ಮನದಲ್ಲಿ ಅಚ್ಚೊತ್ತಲು ಸಾಧ್ಯವಾದಾಗ ಗೆಲ್ಲುತ್ತದೆ. ಮನಸ್ಸಿಗೆ, ಮುಟ್ಟುವ, ತಟ್ಟುವ ಕಾವ್ಯ ಬೆರಗುಗೊಳಿಸುತ್ತದೆ. ಆದರೆ ಕವಿಯಾದವ ಸಾಮಾಜಿಕವಾಗಿ ಎಲ್ಲಾ ವಿಚಾರಗಳ ಆಳಕ್ಕೆ ಇಳಿಯದೆ ಅಮೂರ್ತತೆಯಿಂದ ಮೂರ್ತತೆಯನ್ನು ಸೃಷ್ಟಿಸಲಾರ ಎಂದು ಅವರು ಈ ಸಂದರ್ಭ ತಿಳಿಸಿದರು. ವರ್ತಮಾನದ ವಿಭಿನ್ನ ವ್ಯವಸ್ಥೆಗಳಲ್ಲಿ ಬರಹಗಳ ಗಟ್ಟಿತನ ಮಾಯವಾಗುತ್ತಿರುವುದು ಕಳವಳಕಾರಿಯಾಗಿದ್ದು, ಕವಿಯಾಗುವವನಿಗೆ ಹೊಸ ಪದಗಳ ಸೃಷ್ಟಿ, ರೂಪಕಗಳನ್ನು ಕಡೆದು ನಿಲ್ಲಿಸುವ ಯುಕ್ತಿ ಇರಬೇಕು. ಈ ಹಿನ್ನೆಲೆಯಲ್ಲಿ ಆಳವಾದ ಅಧ್ಯಯನ, ಅನುಭವಗಳ ಪಠ್ಯ ಸಾಕಷ್ಟಿರಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು. ಗಡಿನಾಡಿನ ಭಾಷಾಪರ ಚಳವಳಿಗೆ ಬೆನ್ನೆಲುಬಾಗಿದ್ದ ಸಾಹಿತ್ಯ ಚಳವಳಿ ಗಡಿನಾಡ ಸಾಂಸ್ಕøತಿಕ, ಸಾಹಿತ್ತಿಕ ಅಕಾಡೆಮಿಯ ಮೂಲಕ ಇನ್ನಷ್ಟು ಪ್ರಬುದ್ದಗೊಳ್ಳಲಿ ಎಂದು ತಿಳಿಸಿದರು.
    ಕವಿಗೋಷ್ಠಿಯಲ್ಲಿ ಶ್ರೀಕೃಷ್ಣಯ್ಯ ಅನಂತಪುರ, ಹರೀಶ್ ಪೆರ್ಲ, ವೆಂಕಟ್ ಭಟ್ ಎಡನೀರು, ವಿರಾಜ್ ಅಡೂರು, ಸುಂದರ ಬಾರಡ್ಕ, ದಯಾನಂದ ರೈ ಕಳ್ವಾಜೆ, ಆಶಯ ಕೆ.ಎಂ., ಗಣೇಶ ಪೈ ಬದಿಯಡ್ಕ, ಹರೀಶ್ ಸುಲಾಯ ಒಡ್ಡಂಬೆಟ್ಟು, ಅಕ್ಷತಾರಾಜ್ ಪೆರ್ಲ, ಶ್ಯಾಮಲಾ ರವಿರಾಜ ಕುಂಬಳೆ, ಜ್ಯೋಸ್ನ್ಯಾ ಎಂ.ಕಡಂದೇಲು, ಪ್ರಭಾವತಿ ಕೆದಿಲಾಯ ಪುಂಡೂರು, ಪುರುಷೋತ್ತಮ ಭಟ್ ಪುದುಕೋಳಿ, ಯೋಗೀಶ್ ಮಲ್ಲಿಗೆಮಾಡು,ಅಶ್ವಿನಿ ಕೋಡಿಬೈಲು, ಉದಯ ಭಾಸ್ಕರ ಸುಳ್ಯ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಸಂಧ್ಯಾಗೀತ ಬಾಯಾರು, ಶ್ರೀಕಾಂತ್ ನೆಟ್ಟಣಿಗೆ, ನ್ಯಾಯವಾದಿ ಥೋಮಸ್ ಡಿಸೋಜ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು.   
   ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರು ಸ್ವರಚಿತ ಕಥೆ ವಾಚಿಸಿ ಗೋಷ್ಠಿಗೆ ಚಾಲನೆ ನೀಡಿದರು. ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು. ಕುಂದಾಪುರ ಸುಬೋಧ ವಿದ್ಯಾಸಂಸ್ಥೆಯ ಪ್ರಾಂಶುಪಾಲ ರವಿದಾಸ ಶೆಟ್ಟಿ ಉಪಸ್ಥಿತರಿದ್ದರು. ಅಕಾಡೆಮಿಯ ಜೊತೆ ಕಾರ್ಯದರ್ಶಿ ವಿದ್ಯಾಗಣೇಶ್ ಅಣಂಗೂರು ಸ್ವಾಗತಿಸಿ, ಗೋಷ್ಠಿ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries