HEALTH TIPS

ಆಲ್ ಕೇರಳ ಫೋಟೋಗ್ರಾರ‍್ಸ್ ಅಸೋಸಿಯೇಶನ್ ೩೫ನೇ ಕಾಸರಗೋಡು ಜಿಲ್ಲಾ ಸಮ್ಮೇಳನ- ಛಾಯಾಗ್ರಾಹಕರಿಗೂ ಇಎಸ್‌ಐ ಅನುಕೂಲತೆಗಳು ಲಭಿಸಲು ಪ್ರಯತ್ನ : ಸಂಸದ ರಾಜ್ ಮೋಹನ್ ಉಣ್ಣಿತ್ತಾನ್


       ಮುಳ್ಳೇರಿಯ: ಆಲ್ ಕೇರಳ ಫೋಟೋಗ್ರಾರ‍್ಸ್ ಅಸೋಸಿಯೇಶನ್ (ಎಕೆಪಿಎ) ೩೫ನೇ ಕಾಸರಗೋಡು ಜಿಲ್ಲಾ ಸಮ್ಮೇಳನವು ಕಾಞಂಗಾಡಿನಲ್ಲಿ ನಡೆಯಿತು. ಇಲ್ಲಿನ ವ್ಯಾಪಾರ ಭವನ (ಸಾರಂಗಪಾಣಿ ನಗರ)ದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಛಾಯಾಗ್ರಹಣ ರಂಗದಲ್ಲಿ ಇಎಸ್‌ಐ ಅನುಕೂಲತೆಗಳನ್ನು ದೊರಕಿಸಿಕೊಡುವಲ್ಲಿ ಪ್ರಯತ್ನಿಸಲಾಗುವುದು. ಇದಕ್ಕೆ ಸಂಬAಧಪಟ್ಟ ಮನವಿಗಳನ್ನು ಕೇಂದ್ರ ಸಚಿವರಿಗೆ ನೀಡುತ್ತೇನೆ ಎಂದು ಭರವಸೆಯ ಮಾತುಗಳನ್ನು ಹೇಳಿದರು. ದಿನೇ ದಿನೇ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಛಾಯಾಗ್ರಾಹಕರು ಹರಸಾಹಸಪಡಬೇಕಾಗುತ್ತದೆ ಎಂಬುದು ಗೊತ್ತಿರುವ ವಿಚಾರವಾಗಿದೆ ಎಂದರು.
    ಎಕೆಪಿಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕ್ಕುನ್ನು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎಕೆಪಿಎ ರಾಜ್ಯ ಅಧ್ಯಕ್ಷ ಗಿರೀಶ್ ಪಟ್ಟಾಂಬಿ ಸಭೆಯನ್ನುದ್ದೇಶಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ವೃತ್ತಿಯ ಸಂರಕ್ಷಣೆಗಾಗಿ ನಾವು ಒಗ್ಗಟ್ಟಾಗಿರಬೇಕು. ಆಧುನಿಕತೆಗೆ ಒತ್ತು ನೀಡಿ ನಮ್ಮತನವನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಬ್ಬ ಸದಸ್ಯನೂ ಕಟಿಬದ್ಧರಾಗಬೇಕು ಎಂದರು.
       ಎಕೆಪಿಎ ರಾಜ್ಯ ಪ್ರ.ಕಾರ್ಯದರ್ಶಿ ಜೋಯ್‌ಗ್ರೇಸ್, ಕಾಞಂಗಾಡು ಪ್ರೆಸ್‌ಫೋರಂ ಅಧ್ಯಕ್ಷ ಇ.ವಿ.ಜಯಕೃಷ್ಣನ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಯೂಸುಫ್ ಹಾಜಿ, ಎಕೆಪಿಎ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ತೈಕಡಪ್ಪುರಂ, ರಾಜ್ಯ ಸಮಿತಿ ಸದಸ್ಯ ಎನ್.ಎ.ಭರತನ್, ಕೆ.ಸಿ.ಅಬ್ರಹಾಂ, ರಮೇಶನ್ ಮಾವುಂಗಾಲ್, ಬಿ.ಎ.ಶರೀಫ್, ಎನ್.ವಿ. ಮನೋಹರನ್, ಕಲಾಧರನ್ ಪೆರಿಯ ಶುಭಾಶಂಸನೆಗೈದರು. ಜಿಲ್ಲಾ ಕಾರ್ಯದರ್ಶಿ ಶ್ರೀಜಿತ್ ನಿಲಾಯಿ ಸ್ವಾಗತಿಸಿ, ಪಿಆರ್‌ಒ ಕೆ. ಸುಧೀರ್ ವಂದಿಸಿದರು. ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ಛಾಯಾಚಿತ್ರ ಹಾಗೂ ವೀಡಿಯೋಗ್ರಫಿ ಸ್ಪರ್ಧೆಗಳಲ್ಲಿ ವಿಜೇತ ಸದಸ್ಯರಿಗೆ ಬಹುಮಾನಗಳನ್ನು ನೀಡಲಾಯಿತು. ಅಪರಾಹ್ನ ಪ್ರತಿನಿಧಿ ಸಮ್ಮೇಳನ ನಡೆಯಿತು. ಬೆಳಗ್ಗೆ ಧ್ವಜಾರೋಹಣ, ಛಾಯಾಚಿತ್ರ ಪ್ರದರ್ಶನ ನಡೆಯಿತು. ಮಧ್ಯಾಹ್ನ ಕಾಞಂಗಾಡು ಪೇಟೆಯಲ್ಲಿ ಜರಗಿದ ಆಕರ್ಷಕವಾದ ಮೆರವಣಿಗೆಯಲ್ಲಿ ಎಕೆಪಿಎ ಸದಸ್ಯರು ಪಾಲ್ಗೊಂಡಿದ್ದರು. ಎಕೆಪಿಎ ೩೫ನೇ ರಾಜ್ಯ ಸಮ್ಮೇಳನವು ಡಿಸೆಂಬರ್ ೧೬,೧೭,೧೮ರಂದು ತೃಶ್ಶೂರಿನಲ್ಲಿ ನಡೆಯಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries