ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ಸಂಸ್ಕøತ ಅಕಾಡೆಮಿಕ್ ಕೌನ್ಸಿಲ್‍ನ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹಮ್ಮಿಕೊಂಡ ಜ್ಞಾನದಾಯಿನಿ ಶಿಬಿರದ ಸಮಾರೋಪ ಸಮಾರಂಭವು ಭಾನುವಾರ ಜರಗಿತು.
ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಸಂಸ್ಕøತ ಕಲಿಕೆ ಇದ್ದಲ್ಲಿ ಅಲ್ಲಿ ಸಂಸ್ಕøತಿ ಇರುತ್ತದೆ. ಸಂಸ್ಕøತದಿಂದ ಸಂಸ್ಕಾರ, ಸಂವಹನ ತನ್ಮೂಲಕ ಜ್ಞಾನಾರ್ಜನೆ ಪ್ರಾಪ್ತಿಯಾಗುತ್ತದೆ. ವಿದೇಶೀಯರೂ ಭಾರತೀಯ ಸಂಸ್ಕಾರ, ಸಂಸ್ಕøತಿಯತ್ತ ಆಕರ್ಷಿತರಾಗುತ್ತಿದ್ದು, ಸಂಸ್ಕøತ ಭಾಷೆಗೆ ಪ್ರಾಧಾನ್ಯತೆಯನ್ನು ಕಲ್ಪಿಸುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಸಂಸ್ಕøತವನ್ನು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಲಿತು ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಲಿತ ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದುಕೊಡಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಈ ಶಾಲೆಯಲ್ಲಿ ಉತ್ತಮ ರೀತಿಯಲ್ಲಿ ಶಿಬಿರಗಳನ್ನು ಆಯೋಜಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಲಭಿಸಿರುವುದು ವಿದ್ಯಾರ್ಥಿ ಜೀವನದ ಮಹತ್ವದ ಸಂದರ್ಭ ಎಂದು ಭಾವಿಸಬೇಕು. ಸಂಸ್ಕøತದ ಅಧ್ಯಯನವನ್ನು ಇಲ್ಲಿಗೆ ನಿಲ್ಲಿಸದೆ ಪ್ರತಿದಿನ ಒಂದು ವಾಕ್ಯವಾದರೂ ಸಂಸ್ಕøತದಲ್ಲಿ ಮಾತನಾಡುತ್ತಾ ಭಾಷಾ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದು ಹಿತನುಡಿಗಳನ್ನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ, ಮಾತೃ ಸಂಘದ ಅಧ್ಯಕ್ಷೆ ಪ್ರಮೀಳಾ ಗೋಸಾಡ ಶುಭ ಹಾರೈಸಿದರು. ಶಿಬಿರದ ಸಂಚಾಲಕಿ ವಿದ್ಯಾಗಿರಿ ಶಾಲೆಯ ಸಂಸ್ಕøತ ಅಧ್ಯಾಪಿಕೆ ಅನಿತಾ ಅವರು ತಮ್ಮ ಅನಿಸಿಕೆಗಳನ್ನು ಮುಂದಿಡುತ್ತಾ 3 ದಿನಗಳ ಕಾಲ ನಡೆದ ಶಿಬಿರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಹಾಗೂ ಅಧ್ಯಾಪಕ ವೃಂದದೊಂದಿಗೆ ಪೆÇೀಷಕರ ಸಹಭಾಗಿತ್ವ ಮೆಚ್ಚಲೇ ಬೇಕು. ಎಲ್ಲಾ ಸೌಕರ್ಯಗಳನ್ನು ಸಾಂದರ್ಭಿಕವಾಗಿ ಒದಗಿಸಿರುತ್ತಾರೆ. ಇವರಿಗೆಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ. ಇಂತಹ ಶಿಬಿರಗಳು ಇನ್ನಷ್ಟು ಜರಗಲಿ ಎಂದರು. ವಿದ್ಯಾರ್ಥಿಗಳಾದ ಅನ್ವಿತಾ ಟಿ.,ಆಶ್ಲೇಶ್ ಪಿ.ಎಸ್., ಸುಮೇಧ್, ಅನುರಾಗ್ ಮೊದಲಾದವರು ಶಿಬಿರದ ಅನಿಸಿಕೆಯನ್ನು ಸಭೆಯ ಮುಂದಿಟ್ಟರು. ಅಧ್ಯಾಪಕ ವಿಘ್ನೇಶ್ ಮವ್ವಾರು ಶುಭಕೋರಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದ ಪಾಲಕರು, ಮಹನೀಯರುಗಳ ಉದಾರತೆಯನ್ನು ನೆನಪಿಸುತ್ತಾ ಹಿತನುಡಿಗಳನ್ನಾಡಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಂಸ್ಕøತ ಅಧ್ಯಾಪಿಕೆ ಸುಶ್ಮಾ ನೇತೃತ್ವದಲ್ಲಿ ನಿತ್ಯೋಪಯೋಗಿ ವಸ್ತುಗಳಿಗೆ ಸಂಸ್ಕøತ ಶಬ್ದವನ್ನು ಪರಿಚಯಿಸುವ ಪ್ರದರ್ಶಿನಿ ಶಿಬಿರ ಗಮನ ಸೆಳೆಯಿತು.
ಅಧ್ಯಾಪಕ ನಂದಕುಮಾರ್ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಅಕಾಡೆಮಿಕ್ ಕೌನ್ಸಿಲ್‍ನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡಿಗ ವಂದಿಸಿದರು. ಸುಕುಮಾರ ಬೆಟ್ಟಂಪಾಡಿ ನಿರೂಪಿಸಿದರು. ಶುಕ್ರವಾರದಿಂದ ಭಾನುವಾರದ ತನಕ ಜರಗಿದ ಶಿಬಿರದಲ್ಲಿ ಉಪಜಿಲ್ಲಾಮಟ್ಟದ 24 ಶಾಲೆಗಳಿಂದ 208 ವಿದ್ಯಾರ್ಥಿಗಳು ಹಾಗೂ ಸಂಸ್ಕøತ ಅಧ್ಯಾಪಕ ಅಧ್ಯಾಪಿಕೆಯರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.