ಬದಿಯಡ್ಕ: ಸ್ವಾರ್ಥ ರಾಜಕಾರಣಿಗಳೇ ತುಂಬಿರುವ ಕೇರಳದಲ್ಲಿ ಪರಿವರ್ತನೆ, ಅಭಿವೃದ್ಧಿ ಕಂಡುಬರುತ್ತಿಲ್ಲ. ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿದ ನೀವು ದೇಶದ ಅಭಿವೃದ್ಧಿಗಾಗಿ ಇನ್ನಷ್ಟು ಸಮಯವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಈ ಹಿಂದೆ ದೇಶವನ್ನಾಳಿದ ಸರ್ಕಾರ ದೇಶದ ಪ್ರಗತಿ ಸಾಧಿಸಲು ವಿಫಲವಾಗಿದೆ. ರಾಷ್ಟಿçÃಯ ಸ್ವಯಂಸೇವಕ ಸಂಘದ ದೃಷ್ಟಿಕೋನ ಉಳ್ಳವರು ನಾವು. ರಾಷ್ಟಿçÃಯ ದೃಷ್ಟಿಕೋನದಲ್ಲಿ ನಮ್ಮ ಕೇರಳ ರಾಜ್ಯ ಹಿಂದಿದೆ, ಮಾತ್ರವಲ್ಲ ರಾಷ್ಪಿçÃಯತೆಯನ್ನು ಹೀಯಾಳಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಜವಾಬ್ದಾರಿ ಮತ್ತು ಕರ್ತವ್ಯವನ್ನು ಅರಿತು ಪೆನ್ಶನರ್ ಸಂಘ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಪ್ರಾಂತೀಯ ಸೇವಾ ಪ್ರಮುಖ್ ವಿನೋದ್ ಹೇಳಿದರು.
ಕೋಟ್ಟಯಂನ ಠೇಂಗಡಿಜಿ ನಗರದಲ್ಲಿ ಬುಧವಾರ ನಡೆದ ಕೇರಳ ರಾಜ್ಯ ಪಿಂಚಣಿದಾರರ ಸಂಘದ ೨೨ನೇ ರಾಜ್ಯ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಘಟಿತ ಶಕ್ತಿಯಾಗಿ, ಸಾಮಾಜಿಕ ಪರಿವರ್ತನೆಯಲ್ಲಿ ನಾವು ತೊಡಗಿಸಿಕೊಳ್ಳಬೇಕಾಗಿದೆ. ಈ ದೇಶ ಈಗ ಜಗತ್ತಿಗೆ ಮಾದರಿಯಾಗುತ್ತಿದೆ. ಇದರಿಂದಾಗಿ ನಮಗೆ ಅಭಿಮಾನವಾಗಿದೆ. ಗುರಿಯನ್ನು ತಲಪುವಲ್ಲಿ ನಾವು ಯಶಸ್ವಿಯಾಗುವೆವೆಂಬ ವಿಶ್ವಾಸ ಹೆಚ್ಚಿದೆ. ಸ್ವಾತಂತ್ರಾ÷್ಯನAತರ ನರೇಂದ್ರ ಮೋದಿಯವರ ಆಡಳಿತ ಕಾಲದಲ್ಲಿ ಮಾತ್ರ ಕಾರ್ಮಿಕರ ಹಿತ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ ಎಂಬುದು ಸಂತಸದ ವಿಚಾರವಾಗಿದೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕನಿಷ್ಟ ವೇತನದ ತೀರ್ಮಾನ ಚರಿತ್ರಾರ್ಹವಾಗಿದೆ. ಠೇಂಗಡಿಯವರ ಜನ್ಮಶತಾಬ್ದಿ ವರ್ಷಾಚರಣೆ ಅರ್ಥಪೂರ್ಣವಾಗಬೇಕು ಎಂದಾದರೆ ನಮ್ಮ ರಾಜ್ಯವೂ ಕೂಡ ಪರಿವರ್ತನೆಯಾಗಬೇಕು. ಈ ಕೆಲಸ ನಾವೆಲ್ಲರೂ ಸೇರಿ ಮಾಡೋಣ ಎಂದರು.
ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯ ಅಧ್ಯಕ್ಷ ಎಂ.ಜಿ.ಪುಷ್ಪಾAಗಧನ್ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್, ಕೇರಳ ಎನ್.ಜಿ.ಒ.ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಎಸ್.ಕೆ.ಜಯಕುಮಾರ್ ಶುಭಾಶಂಸನೆಗೈದರು. ಉತ್ಸವ ಸಮಿತಿಯ ಸಂಚಾಲಕರುಗಳಾದ ವಿಜಯ ಕುಮಾರ್ ನಾಯರ್ ಸ್ವಾಗತಿಸಿ, ಕೆ.ಆರ್.ವಿಶ್ವಂಭರನ್ ವಂದಿಸಿದರು.
ಕಾಸರಗೋಡು ಜಿಲ್ಲೆಯಿಂದ ಪಾಲ್ಗೊಂಡ ಸದಸ್ಯರು:
ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ೨೨ನೇ ರಾಜ್ಯ ಸಮ್ಮೇಳನದಲ್ಲಿ ೪೦ಕ್ಕೂ ಹೆಚ್ಚುಮಂದಿ ಪಾಲ್ಗೊಂಡಿದ್ದರು. ಪ್ರಮುಖರಾದ ಈಶ್ವರ ರಾವ್, ಅರವಿಂದ ಕುಮಾರ್ ಅಲೆವೂರಾಯ, ಕರುವಜೆ ಕೇಶವ ಭಟ್, ನಾರಾಯಣ ಭಟ್ ಮೈರ್ಕಳ, ಈಶ್ವರ ನಾಯ್ಕ ಪೆರಡಾಲ, ಸುಬ್ರಾಯ ನಂದೋಡಿ ನೇತೃತ್ವವನ್ನು ನೀಡಿದ್ದರು.