HEALTH TIPS

ಕೆಜೆಯು ಜಿಲ್ಲಾ ಸಮಿತಿ ಸಭೆ- ಸ್ಥಳೀಯ ಪತ್ರಕರ್ತರ ಆಶೋತ್ತರಗಳಿಗೆ ಸರ್ಕಾರ ನೆರವಾಗಬೇಕು-ಸ್ಮಿಜನ್ ತಿರುವನಂತಪುರ


      ಕಾಸರಗೋಡು: ಸ್ಥಳೀಯ ಪತ್ರಕರ್ತರಿಗೆ ರಾಜ್ಯದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಲಭ್ಯವಾಗಿಸುವಲ್ಲಿ ಮುಖ್ಯಮಂತ್ರಿಗಳ ಸಹಿತ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು ಸುತ್ತುಗಳ ಸಮಗ್ರ ಚರ್ಚೆ ನಡೆಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಲಾಗಿದೆ. ಇಂದಿನ ಸಂದಿಗ್ದತೆಯಲ್ಲಿ ವ್ಯಾಪಕ ಸಂಕಷ್ಟಕ್ಕೊಳಗಾಗಿರುವ ಸ್ಥಳೀಯ ಪತ್ರಕರ್ತರ ಕ್ಷೇಮದ ದೃಷ್ಟಿಯಲ್ಲಿ ಸಂಘಟಿತರಾಗಿ ನ್ಯಾಯಯುತ ಹೋರಾಟಗಳ ಮೂಲಕ ಆಶೋತ್ತರಗಳನ್ನು ಪೂರೈಸುವ ಅಗತ್ಯ ಇದೆ ಎಂದು ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಮಿಜನ್ ತಿರುವನಂತಪುರ ಅವರು ತಿಳಿಸಿದರು.
     ಪತ್ರಕರ್ತರ ಸಂಘಟನೆಯಾದ ಕೆಜೆಯು ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಕಾಸರಗೋಡು ಬಿಗ್-14 ಸಭಾಂಗಣದಲ್ಲಿ ನಡೆದ ಜಿಲ್ಲಾ ಘಟಕದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಹಿರಿಯ ಪತ್ರಕರ್ತ ಅಶೋಕ ನೀರ್ಚಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗದ ಅಭದ್ರತೆ, ಮಾಸಿಕ ಗೌರವಧನಗಳ ಅಸಮರ್ಪಕ ವಿತರಣೆಗಳಿಂದ ಕಂಗೆಟ್ಟಿರುವ ಸ್ಥಳೀಯ ಪತ್ರಕರ್ತರ ಬೇಡಿಕೆಗಳನ್ನು ಸಂಬಂಧಪಟ್ಟವರು ಅಲಕ್ಷ್ಯಿಸುವುದರಿಂದ ಸಾಮಾಜಿಕ ಅತಂತ್ರತೆ ಉಂಟಾಗುವುದು. ಸುದ್ದಿಯ ನಿಖರತೆಗಳಿಗಾಗಿ ಹೆಣಗಾಡುವ ಜೊತೆಗೆ ತನ್ನ ಅಸ್ತಿತ್ವವನ್ನೂ ಉಳಿಸಿಕೊಳ್ಳುವ ಜಟಿಲತೆಗಳ ನಿಭಾವಣೆ ಇಂದು ಭಾರೀ ಸಮಸ್ಯೆಗಳಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸಂಬಂಧಪಟ್ಟವರು ನೈಜತೆಯನ್ನು ಅರ್ಥೈಸಿ ಅಗತ್ಯದ ನೆರವು ನೀಡುವಲ್ಲಿ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆಯ ಪ್ರಮುಖರು ಇನ್ನಷ್ಟು ಕಾರ್ಯಶೀಲರಾಗಬೇಕು ಎಂದರು.
     ಸಭೆಯಲ್ಲಿ ಕೆಜೆಯು ರಾಜ್ಯ ಸಮಿತಿ ಸದಸ್ಯ ನಾಝರ್ ಕಾಞÂಂಗಾಡ್, ಗಂಗಾಧರ ಪಳ್ಳತ್ತಡ್ಕ ಉಪಸ್ಥಿತರಿದ್ದು ಮಾತನಾಡಿದರು. ಪತ್ರಕರ್ತರಾದ ಬಾಲಕೃಷ್ಣ ಅಚ್ಚಾಯಿ, ಅಖಿಲೇಶ್ ನಗುಮುಗಂ, ವಿದ್ಯಾ ಗಣೇಶ್ ಅಣಂಗೂರು, ಲತೀಫ್ ಉಳುವಾರ್, ಅಬ್ದುಲ್ ಲತೀಫ್ ಉಪ್ಪಳ, ಧನರಾಜ್ ಐಲ, ಸತ್ತಾರ್ ಕುಂಬಳೆಅಬ್ದುಲ್ ಲತೀಫ್ ಕುಂಬಳೆ, ಶರೀಪ್ ಏರೋಲ್, ಅನ್ವರ್ ಕೋಳಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.
   ಸಭೆಯಲ್ಲಿ ಜಿಲ್ಲಾ ಮಟ್ಟದ ಸಮಾವೇಶವನ್ನು ಡಿ.14 ರಂದು ಕಾಸರಗೋಡಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಸಮಾವೇಶ ನಿರ್ವಹಣೆಗೆ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಅಶೋಕ್ ನೀರ್ಚಾಲ್, ಉಪಾಧ್ಯಕ್ಷ ಅನ್ವರ್ ಕೋಳಿಯಡ್ಕ, ಕಾರ್ಯದರ್ಶಿಯಾಗಿ ಲತೀಫ್ ಕುಂಬಳೆ, ಜೊತೆ ಕಾರ್ಯದರ್ಶಿಗಳಾಗಿ ಗಂಗಾಧರ ಪಳ್ಳತ್ತಡ್ಕ, ಲತೀಫ್ ಉಪ್ಪಳ, ಶರೀಫ್ ಏರೋಲ್ ಖಜಾಂಜಿಯಾಗಿ ವಿದ್ಯಾ ಗಣೇಶ್ ಅಣಂಗೂರು ಅವರನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ ಸಂಘಟನೆಯ ನೂತನ ಸದಸ್ಯರಾಗಿ ಸದಸ್ಯತ್ವಪಡೆದವರಿಗೆ ಗುರುತುಪತ್ರ ವಿತರಿಸಿ ಸ್ವಾಗತಿಸಲಾಯಿತು. ನಾಝರ್ ಕಾಞÂಂಗಾಡ್ ಸ್ವಾಗತಿಸಿ, ಲತೀಫ್ ಕುಂಬಳೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries