ಮಂಜೇಶ್ವರ: ಸಮಗ್ರ ಶಿಕ್ಷಾ ಕಾಸರಗೋಡು ಬಿ.ಆರ್.ಸಿ ಮಂಜೇಶ್ವರ ಇದರ ವತಿಯಿಂದ ಉಲ್ಲಾಸ ಗಣಿತ ಕಿಟ್ ವಿತರಣಾ ಉದ್ಘಾಟನಾ ಸಮಾರಂಭ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೀಯಪದವಿನಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಂಶಾದ್ ಶುಕೂರು ವಹಿಸಿದ್ದರು. ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಮ್ ಅಶ್ರಫ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೇಶ್ವರ ಬ್ಲಾಕ್ ಯೋಜನಾಧಿಕಾರಿ ಗುರುಪ್ರಸಾದ್ ಇವರು ಪ್ರಾಸ್ತಾವಿಕ ಭಾಷಣಗೈದರು. ಕಾರ್ಯಕ್ರಮಕ್ಕೆ ಮೀಂಜ ಪಂಚಾಯತಿ ಆರೋಗ್ಯ ಹಾಗು ಶಿಕ್ಷಣ ಸ್ಥಾಯಿ ಕಮಿಟಿ ಅಧ್ಯಕ್ಷ ಕೃಷ್ಣ ಕೊಮ್ಮಂಗಳ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಬಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣ ಅಧಿಕಾರಿ ದಿನೇಶ ವಿ ಎಸ್.ಎಸ್.ಕೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ದಿಲೀಪ್ ಕುಮಾರ್ ಡಯಟ್ ಅಧಿಕಾರಿ ಶಶಿಧರ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಅನುದಾನಿತ ಶಾಲಾ ಅಧ್ಯಕ್ಷ ಕೃಷ್ಣ ಪ್ರಸಾದ್.ಎಂ. ಮಾತೃಸಂಘದ ಕೈರುನ್ನಿಸಾ ಎಸ್.ಆರ್.ಜಿ ಅಧ್ಯಕ್ಷ ರಘುವೀರ್ ರಾವ್, ಪಂಚಾಯತಿ ವಿದ್ಯಾಭ್ಯಾಸ ಕಾರ್ಯದರ್ಶಿ ಸತ್ಯನಾರಾಯಣ ಶರ್ಮ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸುಧಾಕರ.ವಿ ಸ್ವಾಗತಿಸಿ, ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರ ಕೃಷ್ಣಪ್ರಸಾದ್ ವಂದಿಸಿದರು. ತರಬೇತುದಾರರಾದ ಮೋಹಿನಿ ಟೀಚರ್ ನಿರೂಪಿಸಿದರು.