ಕಾಸರಗೋಡು: ಸಾರ್ವಜನಿಕ ಶಿಕ್ಷಣ ಯಜ್ಞದ ಅಂಗವಾಗಿ `ಇನಿಯುಂ ಮುನ್ನೋಟ್ (ಇನ್ನೂ ಮುಂದಕ್ಕೆ )' ಯೋಜನೆ ಪ್ರಕಾರ ಜಿಲ್ಲಾ ಮಟ್ಟದ ಮುಖ್ಯಶಿಕ್ಷಕರ ಸಂಗಮ ಕಾರ್ಯಕ್ರಮ ಕಾಂಞAಗಾಡಿನಲ್ಲಿ ಶನಿವಾರ ಜರಗಿತು. ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು ಭಾಗವಹಿಸಿದರು.
ಶಿಕ್ಷಣ ಸಚಿವ ಪ್ರೊ.ವಿ.ರವೀಂದ್ರನಾಥ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮೂರೂವರೆ ವರ್ಷ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಯಜ್ಞ ಜಾರಿಯಲ್ಲಿ ರಾಜ್ಯ ಪ್ರಥಮ ಸ್ಥಾನ ಪಡೆದಿದೆ. ಶೇ.೮೨.೮ ಅಂಕವನ್ನು ದೇಶದಲ್ಲೇ ಶಿಕ್ಷಣ ಗಳಿಕೆ ವಲಯದಲ್ಲಿ ಕೇರಳ ಪಡೆದುಕೊಂಡಿದೆ. ಈ ಚಾರಿತ್ರಿಕೆ ಯಶಸ್ಸಿಗೆ ಸಾರ್ಜನಿಕ ಶಿಕ್ಷಣಾಲಯಗಳ ಶಿಕ್ಷಕರೇ ಕಾರಣ ಎಂದರು. ಜನಪರ ನೀತಿ, ಆಧುನೀಕರಣ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ಎಂಬ ಮೂರು ಹಂತಗಳಲ್ಲಿ ಈ ಗುರಿ ಸಾಽಸಲಾಗಿದೆ ಎಂದು ಸಚಿವರು ನುಡಿದರು.
ಶಿಕ್ಷಣ ವಲಯದಲ್ಲಿ ಹೆಚ್ಚುವರಿ ಆಧುನೀಕರಣ ಜಾರಿಗೊಳಿಸುವ ನಿಟ್ಟಿನಲ್ಲಿ ಹೈಟೆಕ್ ತರಗತಿ ಕೊಠಡಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಸಹಕಾರಿ ಬ್ಯಾಂಕ್‌ಗಳು ಸಹಕಾರ ನೀಡಬೇಕು ಎಂದವರು ಆಗ್ರಹಿಸಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಕಾಂಞAಗಾಡು ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಸಾರ್ವಜನಿಕ ಶಿಕ್ಷಣ ಯಜ್ಞ ರಾಜ್ಯ ಸಂಚಾಲಕ ಸಿ.ರಾಮಕೃಷ್ಣನ್, ಜಿಲ್ಲಾ ಶಿಕ್ಷಣ ನಿರ್ದೇಶಕಿ ಕೆ.ವಿ.ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.