ಉಪ್ಪಳ: ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಪಟಾಲಂ ನಾಯಕ ತರಬೇತಿ ಶಿಬಿರ ಕುರುಡಪದವು ಕುರಿಯ ವಿಠಲಶಾಸ್ತಿç ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಿತು. ಪೈವಳಿಕೆ ಗ್ರಾಮ ಪಂಚಾಯಿತಿ ಸದಸ್ಯೆ ತಾರಾ ವಿ. ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಪ್ರಬಂಧಕ ಗೋಪಾಲಕೃಷ್ಣ ಶಾಸ್ತಿç, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎ. ಎಂ. ಅಶ್ರಫ್, ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಆದಿನಾರಾಯಣ ಭಟ್, ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಹಾಯಕ ಆಯುಕ್ತ ಚೇವಾರು ವಿನೋದ್, ಶ್ರೀಕುಮಾರಿ ಟೀಚರ್, ಜಿಲ್ಲಾ ತರಬೇತಿ ಆಯುಕ್ತೆ ಆಶಾಲತ ಕೆ., ಸ್ಕೌಟ್‌ನ ನಾಯಕ ಮಂಜೇಶ್ವರ ಎಸ್‌ಎಟಿ ಶಾಲೆಯ ಲಕ್ಷಿö್ಮÃದಾಸ್ ಪ್ರಭು, ಗೈಡ್ಸ್ ನಾಯಕಿ ಧರ್ಮತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಗಾಯತ್ರಿ ಕಡಂಬಾರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಕೆ. ಸ್ವಾಗತಿಸಿ, ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್ ಚೆರುಗೋಳಿ ವಂದಿಸಿದರು.