HEALTH TIPS

ಐಎಡಿಯ ಸಾಧನಾ ಕಿರೀಟಕ್ಕೆ ಕೇಂದ್ರ ಸಚಿವರ ಮೆಚ್ಚುಗೆಯ ತುರಾಯಿ-ಅಚ್ಚರಿಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವ


     ಕಾಸರಗೋಡು: ಗಡಿನಾಡು ಕಾಸರಗೋಡಿನ ಮಹತ್ವಪೂರ್ಣ ಸಾಧನೆಗಳಲ್ಲಿ ಒಂದಾಗಿರುವ ಆನೆಕಾಲು ರೋಗ ನಿಯಂತ್ರಣದ ಐಎಡಿಯ ಸಾಧನೆಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಅಚ್ಚರಿ ವ್ಯಕ್ತಪಡಿಸಿ ಶ್ಲಾಘಿಸಿ ಟ್ವೀಟ್ ಮಾಡಿರುವುದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.
     ಮಧೂರು ಸಮೀಪದ ಉಳಿಯತ್ತಡ್ಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್ಟಿಟ್ಯೂಟ್ ಆಫ್ ಎಪ್ಲೆöÊಡ್ ಡರ್ಮಟೋಲಜಿ(ಐಎಡಿ) ಕಳೆದ ಒಂದೂವರೆ ದಶಕಗಳಿಂದ ಆನೆಕಾಲು ರೋಗ ನಿಯಂತ್ರಣ-ಚಿಕಿತ್ಸೆಯಲ್ಲಿ ಕಾರ್ಯತತ್ಪರವಾಗಿ ಆನೆಕಾಲು ರೋಗ ನಿಯಂತ್ರಣದಲ್ಲಿ ಆಯುರ್ವೇದ, ಹೋಮಿಯೋಪತಿ ಹಾಗೂ ಅಲೋಪತಿ ವೈದ್ಯಕೀಯ ವಿಭಾಗಗಳನ್ನು ಜೊತೆಯಾಗಿಸಿ ಸಂಯೋಜಿತ ಚಿಕಿತ್ಸಾ ಕ್ರಮಗಳನ್ನು ಹುಟ್ಟುಹಾಕಿದೆ. ಇಲ್ಲಿ ದಿನನಿತ್ಯ ನೂರಾರು ಮಂದಿ ಭಾರತದ ಉದ್ದಗಲದಿಂದ ಚಿಕಿತ್ಸೆಗೆ ಆಗಮಿಸಿ ಗುಣಮುಖರಾಗಿ ತೆರಳುತ್ತಿದ್ದಾರೆ. ಇಲ್ಲಿಯ ನಿರ್ದೇಶಕ ಡಾ.ಎಸ್.ಆರ್.ನರಹರಿ ಮತ್ತು ಅವರ ತಂಡದವರು ನಿರಂತರ ಪರಿಶ್ರಮದಿಂದ ಐಎಡಿ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ.
      ಕಳೆದ ಅಕ್ಟೋಬರ್ ೨೮-೨೯ ರಂದು ನವದೆಹಲಿಯಲ್ಲಿ ಆನೆಕಾಲು ಸಹಿತ ವಿವಿಧ ಮಾರಕ ರೋಗಗಳ ವೈದ್ಯಕೀಯ ಸಂಶೋಧನೆಗಳ ರಾಷ್ಟಿçÃಯ ಕಾರ್ಯಾಗಾರ ನಡೆದಿತ್ತು. ಡಾ.ಎಸ್.ಆರ್.ನರಹರಿಯ ನೇತೃತ್ವದಲ್ಲಿ ಐಎಡಿ ತಂಡ ಕಾರ್ಯಾಗಾರದಲ್ಲಿ ಭಾಗವಹಿಸಿ ಆನೆಕಾಲು ರೋಗ ನಿಯಂತ್ರಣದಲ್ಲಿ ಸಂಯೋಜಿತ ಚಿಕಿತ್ಸಾ ವಿಧಾನದ ಪ್ರದರ್ಶನ ಹಾಗೂ ಪ್ರಬಂಧ ಮಂಡನೆ ನಡೆಸಿದ್ದರು. ಈ ಕಾರ್ಯಾಗಾರಕ್ಕೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರನ್ನು ಐಎಡಿಯ ವಿಶೇಷ ಸಂಯೋಜಿತ ಚಿಕಿತ್ಸಾ ವಿಧಾನವು ಗಮನ ಸೆಳೆದಿದ್ದು, ಡಾ.ಎಸ್.ಆರ್.ನರಹರಿಯವರಿಂದ ಮಾಹಿತಿಗಳನ್ನು ಪಡೆದುಕೊಂಡರು. ಜೊತೆಗೆ ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಗತ್ಯದ ಸಹಕಾರಕ್ಕೆ ವ್ಯವಸ್ಥಿತ ಕಾರ್ಯತಂತ್ರಗಳಿಗಾಗಿ ಯೋಜನೆ ಸಿದ್ದಪಡಿಸುವ ಬಗ್ಗೆ ಭರವಸೆ ನೀಡಿದ್ದರು.
    ಇದೀಗ ಕೇಂದ್ರ ಸಚಿವರು ತಮ್ಮ ಟ್ವಿಟರ್ ಮೂಲಕ ಐಎಡಿಯ ಸಂಯೋಜಿತ ಚಿಕಿತ್ಸಾ ವಿಧಾನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶ್ಲಾಘಿಸಿದ್ದು, ಕ್ರಮಗಳಿಗಾಗಿ ಮುಂದುವರಿಯುವ ಬರಹಗಳನ್ನು ಟ್ವೀಟಿಸಿದ್ದಾರೆ. ಹಲವು ಬಾರಿ ರಿ-ಟ್ವೀಟ್ ಗೊಳಗಾದ ಕೇಂದ್ರ ಸಚಿವರ ಬರಹದ ಬೆನ್ನಿಗೇ ಕೇಂದ್ರ ಆರೋಗ್ಯ ಮಂತ್ರಾಲಯದಿAದ ಐಎಡಿಗೂ ಶ್ಲಾಘನಾ ಸಂದೇಶ ರವಾನೆಯಾಗಿರುವುದು ಗಮನಾರ್ಹವಾಗಿದೆ.
       ಅಭಿಮತ:
   ಐಎಡಿ ಕೇಂದ್ರವನ್ನು ಸಮಾನಮನಸ್ಕ ಮಿತ್ರರೊಂದಿಗೆ ಕಟ್ಟಿ ಬೆಳೆಸಿದ್ದು, ಆನೆಕಾಲು ರೋಗ ಸಹಿತ ಚರ್ಮ ವ್ಯಾದಿಗಳ ನಿಯಂತ್ರಣ, ಪರಿಹಾರ ಮತ್ತು ಚಿಕಿತ್ಸೆಯಲ್ಲಿ ನಿತ್ಯ ನಿರಂತರ ಸಂಶೋಧನೆಗಳು ನಡೆಯುತ್ತಿದೆ. ಈಗಾಗಲೇ ದೇಶದ ಉದ್ದಗಲದ ನೂರಾರು ಮಂದಿ ಆನೆಕಾಲು ರೋಗಿಗಳು ಉಚಿತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ರೋಗ ಉಲ್ಬಣಗೊಂಡವರಲ್ಲಿ ಶೇ.೮೦ ನಿಯಂತ್ರಣಕ್ಕೆ ಬಂದಿದೆ. ಐಎಡಿ ಕೇಂದ್ರಕ್ಕೆ ಈವರೆಗೆ ಸರ್ಕಾರದ ಯಾವುದೇ ನೆರವುಗಳು ಬಂದಿಲ್ಲ. ಆದರೆ ಇದೀಗ ಕೇಂದ್ರ ಸಚಿವರ ವೈಯುಕ್ತಿಕ ಕಾಳಜಿ ಮತ್ತು ಟ್ವೀಟ್ ಮೂಲಕ ವ್ಯಕ್ತಪಡಿಸಿರುವ ಶ್ಲಾಘನೆ ಭರವಸೆ ಮೂಡಿಸಿದ್ದು, ದೇಶಾದ್ಯಂತ ಈ ಚಿಕಿತ್ಸಾ ಕ್ರಮವನ್ನು ವಿಸ್ತರಿಸುವ ಆಶಾಭಾವನೆ ಇದೆ.
                                                                          ಡಾ.ಎಸ್.ಆರ್.ನರಹರಿ.
                                                                       ಖ್ಯಾತ ಚರ್ಮ ವೈದ್ಯರು, ನಿರ್ದೇಶಕರು ಐಎಡಿ ಕಾಸರಗೋಡು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries