HEALTH TIPS

ಡಾ.ಸಲೀಂ ಆಲಿ ದಿನಾಚರಣೆ- ವಿದ್ಯಾರ್ಥಿಗಳಿಂದ ಪಕ್ಷಿ ವೀಕ್ಷಣೆ

      ಕುಂಬಳೆ: ಭಾರತದ ಪಕ್ಷಿ ವಿಜ್ಞಾನಿ ಡಾ.ಸಲೀಂ ಆಲಿಯವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಪಕ್ಷಿ ವೀಕ್ಷಿಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಆ ಪ್ರಯುಕ್ತ ಕುಂಬಳೆ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಎಸ್. ಸ್ವಯಂ ಸೇವಕರು ಕಿದೂರಿನಲ್ಲಿ ಪಕ್ಷಿ ವೀಕ್ಷಣೆ ನಡೆಸಿದರು.
     ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಉದ್ಘಾಟಿಸಿದರು. ಜೈವ ವೈವಿಧ್ಯದ ತಾಣವಾದ ಕಿದೂರು ಇಂದು ಪಕ್ಷಿಗಳ ಚಂದದೂರು. ಇಲ್ಲಿರುವ ಆವಾಸ ವ್ಯವಸ್ಥೆ ಪ್ರಾಣಿ ಪಕ್ಷಿಗಳಿಗೆ ಪೂರಕವಾಗಿದ್ದು ಹಲವು ಪರಿಸರ ಅಧ್ಯಯನ ಶಿಬಿರಗಳು ಜರಗುತ್ತವೆ. ಆಸಕ್ತಿದಾಯಕ ವಿದ್ಯಾರ್ಥಿಗಳಿಗೆ ಗ್ರಾಮ ಸದಾ ತೆರೆದ ಬಾಗಿಲು ಎಂದು ಅವರು ಈ ಸಂದರ್ಭ ನುಡಿದರು.
       ಕಾಜೂರು ಪಳ್ಳ ಸಂದರ್ಶಿಸಿದ ಮಕ್ಕಳು ಅಂತರ್ಜಲ ಮರುಪೂರಣಕ್ಕೆ ನೈಸರ್ಗಿಕ ಪಳ್ಳಗಳ ಮಹತ್ವವನ್ನು ಮನಗಂಡರು. ಹಳದಿ ಟಿಟ್ಟಿಭ, ಹಳದಿ ಕಾಲಿನ ಹಸಿರು ಪಾರಿವಾಳ, ಸಣ್ಣ ಸ್ವಿಪ್ಟ್, ಮರಳ ಗೊರವ ಹಕ್ಕಿಗಳನ್ನಲ್ಲದೆ ಕಿದೂರಿನ ಸ್ಥಿರ ನಿವಾಸಿಯಾದ ಅಪರೂಪದ ಕೇಸರಿ ಕುತ್ತಿಗೆಯ ಹಸಿರು ಪಾರಿವಾಳವನ್ನು ವೀಕ್ಷಿಸುವ  ಸೌಭಾಗ್ಯವೂ ದೊರಕಿತು. ಪಕ್ಷಿ ವೀಕ್ಷಕ ಅಧ್ಯಾಪಕ ರಾಜು ಕಿದೂರು ಮಾರ್ಗದರ್ಶನ ನೀಡಿದರು.  ಪ್ರಾಧ್ಯಾಪಕರಾದ ರವಿ ಹಾಗೂ ಸಿದ್ದಿಕ್ ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries