ಕಾಸರಗೋಡು: ಅಪಘಾತ, ರೋಗಿಗಳ ಅನಿವಾರ್ಯತೆ ಸಹಿತ ಸಾರ್ವಜನಿಕಲಯದಲ್ಲಿ ತಲೆದೋರುವ ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಿರುವವರನ್ನು ತಕ್ಷಣ ಆಸ್ಪತ್ರೆಗಳಿಗೆ ತಲಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕ್ಷಿಪ್ರಗತಿಯ ಆಂಬುಲೆನ್ಸ್ ಸೇವೆ ಸಿದ್ಧವಾಗಿದೆ.
ಆರೋಗ್ಯ ಇಲಾಖೆ ವತಿಯಿಂದ ಜಾರಿಗೊಳಿಸಲಾದ "ಕನಿವ್(ಅನುಕಂಪ)" ಪ್ರಕಾರ ಜಿಲ್ಲೆಗೆ ೧೦ ಆಂಬುಲೆನ್ಸ್ ಮಂಜೂರು ಮಾಡಲಾಗಿದ್ದು, ವಿವಿಧ ವಲಯಗಳಲ್ಲಿ ನೇಮಿಸಲಾಗಿದೆ. ತುರ್ತು ಹಂತಗಳಲ್ಲಿ ಅಗತ್ಯವಿರುವವರು "೧೦೮" ಎಂಬ ನಂಬ್ರಕ್ಕೆ ಕರೆಮಾಡಿದರೆ ಸಾಕು. ತಕ್ಷಣ ಆ ಪ್ರದೇಶಕ್ಕೆ ಸಮೀಪವಿರುವ ಪರಿಸರದ ಆಂಬುಲೆನ್ಸ್ ಧಾವಿಸಿ ಬಂದು ಅಗತ್ಯವಿರುವವರನ್ನು ಆಸ್ಪತ್ರೆಗೆ ರವಾನಿಸಲಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡಿನ ಜಿಲ್ಲಾ ಆಸ್ಪತ್ರೆ, ಪೆರಿಯ, ಮಂಗಲ್ಪಾಡಿ, ಮಂಜೇಶ್ವರ, ಉದುಮಾ, ಮುಳ್ಳೇರಿಯ, ಬೇಡಡ್ಕ, ಕುಂಬಳೆ, ಚೆರುವತ್ತೂರು ಸಹಿತ ಪ್ರದೇಶಗಳಲ್ಲಿ ಆಂಬುಲೆನ್ಸ್ ಗಳು ಚಟುವಟಿಕೆ ನಡೆಸಲಿವೆ. ಚಾಲಕ ಮತ್ತು ತರಬೇತಿ ಲಭಿಸಿದ ಸಿಬ್ಬಂದಿಯೊಬ್ಬರು ವಾಹನದಲ್ಲಿರುವರು. ಇವುಗಳಲ್ಲಿ ೫ ವಾಹನಗಳು ದಿನದ ೨೪ ತಾಸುಗಳೂ, ಉಳಿದವು ೧೨ ತಾಸುಗಳೂ ಚಟುವಟಿಕೆ ನಡೆಸಲಿದ್ದು, ಸಾರ್ವಜನಿಕರು ಸೇವೆ ಪಡೆದುಕೊಳ್ಳಬಹುದು. ಈ ಆಂಬುಲೆನ್ಸ್ ಗೆ ಸಂಬAಧಪಟ್ಟ ಆನ್ ಲೈನ್ ಚಟುವಟಿಕೆಗಳು ತಿರುವನಂತಪುರAನಲ್ಲಿ ಏಕೀಕರಿಸಲಾಗುತ್ತಿದೆ.