ನವದೆಹಲಿ: ಅಯೋಧ್ಯೆಯ ತೀರ್ಪು ಬಂದಿದ್ದು, ರಾಮಜನ್ಮಭೂಮಿ ವಿಷಯವನ್ನು ರಾಷ್ಟ್ರೀಯ ವಿಷಯವನ್ನಾಗಿಸಿದ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಪ್ರತಿಕ್ರಿಯೆ ನೀಡಿದ್ದಾರೆ.
ಕನಸು ನೆರವೇರಿದ ಕ್ಷಣ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ ಕೆ ಅಡ್ವಾಣಿ ಬಣ್ಣಿಸಿದ್ದಾರೆ. ಸ್ವಾತಂತ್ರ‍್ಯ ಚಳುವಳಿಯ ನಂತರ ಭಾರತದ ಬಹುದೊಡ್ಡ ಚಳುವಳಿಗೆ ನನ್ನದೇ ಆದ ಕೊಡುಗೆ ನೀಡುವುದಕ್ಕೆ ದೇವರು ನನಗೆ ಅವಕಾಶ ನೀಡಿದ್ದ ಎಂದು ಹೇಳಿರುವ ಅಡ್ವಾಣಿ, ಪಂಚಸದಸ್ಯ ಪೀಠ ಸರ್ವಾನುಮತದಿಂದ ತೀರ್ಪು ನೀಡಿರುವುದನ್ನುಸ್ವಾಗತಿಸುವುದಾಗಿ ಹೇಳಿದ್ದಾರೆ. ರಾಮ ಹಾಗೂ ರಾಮಾಯಣ ಭಾರತದ ಸಂಸ್ಕೃತಿ ಹಾಗೂ ನಾಗರಿಕತೆಯ ಪರಂಪರೆಯಲ್ಲಿ ಘನತೆಯುಳ್ಳದ್ದಾಗಿದೆ. ರಾಮಜನ್ಮಭೂಮಿ ವಿಶೇಷ ಹಾಗೂ ಪವಿತ್ರ ಸ್ಥಳವೆಂದು ಕೋಟ್ಯಂತರ ಭಾರತೀಯರು ಹಾಗೂ ವಿದೇಶಗಳಲ್ಲಿರುವ ಜನರ ಹೃಯದಲ್ಲಿ ಪೂಜನೀಯ ಸ್ಥಾನ ಪಡೆದುಕೊಂಡಿದೆ ಎಂಬುದನ್ನು ಯಾವಗಲೂ ಹೇಳುತ್ತಿದ್ದೆ.
ಸುಪ್ರೀಂ ತೀರ್ಪಿನಿಂದ ಅವೆಲ್ಲಾ ಭಾವನೆಗಳಿಗೂ ಗೌರವ ದೊರೆತಂತಾಗಿದೆ, ಶಾಂತಿ ಹಾಗೂ ಕೋಮುಸೌಹಾರ್ದವನ್ನು ಅಪ್ಪಿಕೊಳ್ಳುವ ಕಾಲ ಬಂದಿದೆ ಎಂದು ಅಡ್ವಾಣಿ ಹೇಳಿದ್ದಾರೆ.