ಬದಿಯಡ್ಕ: ಹಾಸನದಲ್ಲಿ ಇಂದು (ನ.29 ಹಾಗೂ 30) ಹಾಗೂ ನಾಳೆ ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಮ್ಮೇಳನ ನಡೆಯಲಿದ್ದು, ಜಿಲ್ಲೆಯ ಏಳು ಮಂದಿ ಬಾಲ ಪ್ರತಿಭೆಗಳ ಸಹಿತ ಪೆರ್ಲದ ಸವಿಹೃದಯದ ಕವಿ ಮಿತ್ರರು ವೇದಿಕೆಯ ಪದಾಧಿಕಾರಿಗಳು ಭಾಗವಹಿಸಲು ಪ್ರಯಾಣ ಬೆಳೆಸಿದರು.
ಕವಿಗೋಷ್ಠಿಯ ಅಧ್ಯಕ್ಷೆಯಾಗಿ ಪೆರ್ಲ ಕಾಟುಕುಕ್ಕೆಯ ಬಾಲ ಪ್ರತಿಭೆ ಸೃಷ್ಟಿ ಕೆ.ಶೆಟ್ಟಿ ಆಯ್ಕೆಯಾಗಿದ್ದಾಳೆ. ಸಮ್ಮೇಳನದ ಸರ್ವಾಧ್ಯಕ್ಷತಾಗಿ ತುಮಕೂರಿನ ಕೀರ್ತನ ನಾಯಕ್ ಆಯ್ಕೆಯಾಗಿದ್ದಾಳೆ.
ಕಾಸರಗೋಡಿನ ಬಹುಮುಖ ಪ್ರತಿಭೆ, ಡ್ರಾಮಾ ಜ್ಯೂನಿಯರ್ಸ್ ವಿಜೇತ ಮುಳ್ಳೇರಿಯದ ಅನೂಪ್ ರಮಣ ಶರ್ಮನ ಪ್ರತಿಭಾ ಪ್ರದರ್ಶನಕ್ಕೂ ಸಮ್ಮೇಳನದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದೆ.ಜೊತೆಗೆ ಕವಿಗೋಷ್ಠಿಯ ನಿರೂಪಣೆಯಲ್ಲಿ ಅನೂಪ್ ರಮಣ ಶರ್ಮ ಗಮನ ಸೆಳೆಯಲಿದ್ದಾನೆ. ಅಲ್ಲದೆ ಪ್ರಿಯಾ ಸಾಯ, ಅಭಿ ಪೆರ್ಲ, ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ಸೌಪರ್ಣಿಕಾ ಕುರಿಯತ್ತಡ್ಕ, ಪವನ್ ದೀಪ್ ಬಾರಡ್ಕ ಅವರು ಕವಿತಾ ವಾಚನ ನಡೆಸುವರು.ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಮ್ಮೇಳನದಲ್ಲಿ ಪ್ರತಿಭಾನ್ವಿತರನ್ನು ಪರಿಚಯಿಸುವಲ್ಲಿ ಕಾಸರಗೋಡಿನ ಸಾಹಿತ್ಯ-ಸಾಂಸ್ಕøತಿಕ ಸಂಸ್ಥೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆ ನೇತೃತ್ವ ವಹಿಸಿದ್ದು, ನಿರ್ದೇಶಕ ರಾಧಾಕೃಷ್ಣ ಉಳಿಯತ್ತಡ್ಕ, ಸಂಚಾಲಕ ಸುಭಾಶ್ ಪೆರ್ಲ, ಪದ್ಮಾ ಟೀಚರ್ ಮುಳ್ಳೇರಿಯ, ಮಹಾಲಿಂಗೇಶ್ವರ ಎನ್ ಮುಳ್ಳೇರಿಯ, ವೆಂಕಟ್ ಭಟ್ ಎಡನೀರು, ಪರಮೇಶ್ವರ ನಾಯ್ಕ್ ಎನ್, ಹರೀಶ್ ಪೆರ್ಲ,ಕಾಟುಕುಕ್ಕೆ ಪಟ್ಲ ರಾಜಾರಾಮ ಶೆಟ್ಟಿ ಮೊದಲಾದವರು ಪಾಲ್ಗೊಳ್ಳುವರು.