ಕಾಸರಗೋಡು: ದೀಪ ಬೆಳಗಿಸುವುದರ ಮೂಲಕ ಕತ್ತಲು ದೂರವಾಗಿ ಬೆಳಕು ಬರುತ್ತದೆ, ಮಾನವನ ಅಜ್ಞಾನ ತೊಲಗಿ ಜ್ಞಾನದತ್ತ ಮರಳುತ್ತಾನೆ. ಅದಕ್ಕಾಗಿ ಬೆಳಕು ಜ್ಞಾನದ ಸಂಕೇತ ಎಂಬುದಾಗಿ ಹೇಳಿದ್ದಾರೆ. ಇಂತಹ ದೀಪ ಬೆಳಗಿಸುವುಕ್ಕೆ ಸೂಕ್ತವಾದ ಮಾಸ ಕಾರ್ತಿಕಮಾಸ. ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ನಕ್ಷತ್ರ. ಈ ದಿನ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಹಾದೀಪೆÇೀತ್ಸವ ಆಚರಿಸಲಾಯಿತು.
ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಶ್ರೀ ಶೇಷವನ ಮಹಿಳಾ ಭಕ್ತ ವೃಂದ, ಚಿನ್ಮಯ ಮಹಿಳಾ ಭಕ್ತ ವೃಂದ, ಶ್ರೀ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ಮಂಡಳಿ ಅಣಂಗೂರು, ಶ್ರೀ ಮಹಾಗಣಪತಿ ಮಹಿಳಾ ಭಜನಾ ಸಂಘ ಮಧೂರು, ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಳತ್ತೂರು, ಶ್ರೀ ಕೊರತಿ ಬಂಟ್ಸ್ ಮಹಿಳಾ ಭಜನಾ ಸಂಘ ಬದಿಯಡ್ಕ, ಶ್ರೀ ರಾಜರಾಜೇಶ್ವರಿ ಮಾತೃ ಮಂಡಳಿ ಪೆರುವಾಯಿ, ಸಪ್ತಗಿರಿ ಮಹಿಳಾ ಭಜನಾ ಸಂಘ ಕಾಸರಗೋಡು, ಶ್ರೀ ವಿಷ್ಣುವಿನಾಯಕ ಭಜಕವೃಂದ ಕಾವುಗೋಳಿ, ಶ್ರೀ ಚಾಮುಂಡೇಶ್ವರಿ ಮಹಿಳಾ ಭಜನಾ ಸಂಘ ಕೂಡ್ಲು ಇವರಿಂದ ವಿಶೇಷ ಸಂಕೀರ್ತನಾರ್ಚನೆ ನಡೆಯಿತು.
ಸಂಜೆ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟ ಮತ್ತು ಶಿಷ್ಯ ವೃಂದ, ಹವ್ಯಕ ಪರಿಷತ್ತು ಮುಳ್ಳೇರಿಯ ಮಂಡಲ ಇವರಿಂದ ವೇದ ಪಾರಾಯಣ ಜರಗಿತು. ರಾತ್ರಿ ವಿಶೇಷ ಅಲಂಕಾರ ಸಹಿತ ದೀಪೆÇೀತ್ಸವದೊಂದಿಗೆ ಕಾರ್ತಿಕ ಪೂಜೆ ನಡೆಯಿತು. ನಂತರ ವಿಶೇಷ ಅನ್ನದಾನವೂ ಜರಗಿತು. ನವೆಂಬರ್ 26 ರಂದು ಕಾರ್ತಿಕಮಾಸ ದೀಪೆÇೀತ್ಸವ ಸಂಪನ್ನ ಗೊಳ್ಳಲಿದೆ. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಸಮಿತಿ ಯುವಕ ಸಂಘ, ಮಹಿಳಾ ಸಂಘ ಕಾರ್ಯಕ್ರಮದ ನೇತೃತ್ವ ವಹಿಸಿದರು.