ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳಾದ ವೋಡಾಫೆÇೀನ್ ಐಡಿಯಾ ಹಾಗೂ ಏರ್ ಟೆಲ್ ಸಂಸ್ಥೆಗಳು ಎರಡನೆ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ದಾಖಲಿಸಿವೆ.
ಸರ್ಕಾರಕ್ಕೆ ನೀಡಬೇಕಿದ್ದ ಬೃಹತ್ ಪ್ರಮಾಣದ ಬಾಕಿ ಮೊತ್ತವನ್ನು ಪಾವತಿಸಬೇಕಿದ್ದ ಸಂಸ್ಥೆಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದ್ದು, ವೊಡಾಫೆÇೀನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ ಒಟ್ಟಾರೆ 50,922 ಕೋಟಿ ರೂಪಾಯಿ ನಷ್ಟ ಎದುರಿಸಿದೆ. ಇನ್ನು ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಏರ್ ಟೆಲ್ 23,044.9 ಕೋಟಿ ರೂಪಾಯಿಗಳ ನಿವ್ವಳ ನಷ್ಟ ಎದುರಿಸಿದೆ.
ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವೊಡಾಫೆÇೀನ್ ಐಡಿಯಾ ಹಾಗೂ ಏರ್ ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರೂಪಾಯಿಗಳಷ್ಟು ಬಾಕಿ ಮೊತ್ತ ಹಾಗೂ ಕಳೆದ ತಿಂಗಳ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಿತ್ತು. ಏರ್ ಟೆಲ್ ಸಂಸ್ಥೆ 34,260 ಕೋಟಿ ಬಾಕಿ ನೀಡಬೇಕಿತ್ತು.