HEALTH TIPS

ಕ್ಯಾನ್ಸರ್ ಬಾಧಿತನೊಂದಿಗಿನ ಸಂಬAಧ ಗಟ್ಟಿಗೊಳ್ಳಲಿ- ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ರಾಷ್ಟಿçÃಯ ಕ್ಯಾನ್ಸರ್ ಜಾಗೃತಿ ದಿನಾಚರಣೆಯಲ್ಲಿ ಉಪನ್ಯಾಸಕಿ ನಿವೇದಿತ ಪಿ.

 
      ಪೆರ್ಲ: ಕ್ಯಾನ್ಸರ್ ಎಂಬುದು ಸಾಂಕ್ರಾಮಿಕ ರೋಗವಲ್ಲ. ಕ್ಯಾನ್ಸರ್ ಬಾಧಿತನಿಂದ ದೂರ ಉಳಿಯುವುದು ಸರಿಯಲ್ಲ, ಕ್ಯಾನ್ಸರ್ ಬಾಧಿತನೊಂದಿಗಿನ ಸಂಬAಧ ಗಟ್ಟಿಗೊಳ್ಳಬೇಕೆ ವಿನಃ ಶಿಥಿಲಗೊಳ್ಳಬಾರದು.  ನಾವು ಕ್ಯಾನ್ಸರ್ ಬಾಧಿತರಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ಪೆರ್ಲ ನಾಲಂದ ಕಾಲೇಜಿನ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತç ವಿಭಾಗದ ಉಪನ್ಯಾಸಕಿ ನಿವೇದಿತ ಪಿ. ಹೇಳಿದರು.
       ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ರಾಷ್ಟಿçÃಯ ಕ್ಯಾನ್ಸರ್ ಜಾಗೃತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
   ಅತಿಯಾದ ಜೀವಕೋಶಗಳ ಬೆಳವಣಿಗೆಯನ್ನು ಕ್ಯಾನ್ಸರ್ ಎನ್ನುತ್ತಾರೆ. ಬದಲಾಗುತ್ತಿರುವ ಜೀವನ ಕ್ರಮ, ಆಹಾರ ಪದ್ಧತಿ, ಮಾನಸಿಕ ಒತ್ತಡ, ವ್ಯಾಯಾಮ ರಹಿತ ಬದುಕು, ಮಾಧಕ ವಸ್ತುಗಳ ಬಳಕೆ ಮುಂತಾದವುಗಳು ಕ್ಯಾನ್ಸರ್ ರೋಗ ಬಾಧಿಸುವಿಕೆಗೆ ನಾಂದಿ ಹಾಡುತ್ತಿವೆ. ತಂಬಾಕು ಉತ್ಪನ್ನಗಳ ಸೇವೆನೆಯಿಂದ ಬರುವ ಕ್ಯಾನ್ಸರ್ ನಿಂದಾಗಿ ದೇಶದಲ್ಲಿ ಪ್ರತಿನಿತ್ಯ ೩೫೦೦ ಮಂದಿ ಮರಣವನ್ನಪ್ಪುತ್ತಿದ್ದಾರೆ. ಇವುಗಳು ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ, ಮನೋರಂಜನೆಗಾಗಿ ಬಳಸಿ, ಬಳಿಕ ಸಂಪೂರ್ಣವಾಗಿ ಚಠಕ್ಕೆ ಆಂಟಿಕೊಳ್ಳುತ್ತಾರೆ ಎಂದರು. ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಹೆಚ್ಚು ಹೆಚ್ಚು ಸೇವಿಸುವುದು, ದಿನನಿತ್ಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸುವುದು, ಜಂಕ್ ಫುಡ್ ಗಳನ್ನು ಸೇವಿಸದಿರುವುದು, ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದು, ಆರೋಗ್ಯದಲ್ಲಿ ಏರುಪೇರು ಕಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವ ಮುಖಾಂತರ ಕ್ಯಾನ್ಸರ್ ರೋಗ ಭಾದಿಸದಂತೆ ಮುಂಜಾಗ್ರತೆ ವಹಿಸಬೇಕು ಎಮದು ಅವರು ತಿಳಿಸಿದರು.  ಕ್ಯಾನ್ಸರ್ ರೋಗದ ಬಗ್ಗೆ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ಕ್ಯಾನ್ಸರ್ ರೋಗಕ್ಕೂ ಚಿಕಿತ್ಸೆ ಲಭ್ಯವಿದೆ. ಪ್ರಾಥಮಿಕ ಹಂತದಲ್ಲಿಯೇ ಈ ರೋಗವನ್ನು ಪತ್ತೆಹಚ್ಚಿದಲ್ಲಿ ಚಿಕಿತ್ಸೆ ಫಲಕಾರಿಯಾಗುತ್ತದೆ. ಕಿಮೋಥೆರಪಿ, ರೇಡಿಯೋ ಥೆರಪಿ, ಸರ್ಜರಿ ಮುಖಾಂತರ ಕ್ಯಾನ್ಸರ್ ರೋಗದಿಂದ ಹೊರಬರಬಹುದು ಎಂದವರು ಮಾಹಿತಿ ನೀಡಿದರು. ತ್ವಚ್ಚೆಯಲ್ಲಿ ತುರಿಕೆ, ಗಾಯಗಳು ಒಣಗದೇ ಇರುವುದು, ಬಾಯಿ ಅಥವಾ ನಾಲಿಗೆಯಲ್ಲಿ ಊತಗಳು, ಜಗಿಯುವುದರಲ್ಲಿ ತೊಂದರೆ ಅಥವಾ ಹಸಿವು ಇಲ್ಲದಿರುವುದು, ಮೂತ್ರದಲ್ಲಿ ಬದಲಾವಣೆ, ರಕ್ತಸ್ರಾವ, ಧ್ವನಿಯಲ್ಲಿ ಬದಲಾವಣೆ, ನಿರಂತರ ಕೆಮ್ಮು, ಚರ್ಮದ ಬಣ್ಣದಲ್ಲಿ ಬದಲಾವಣೆ, ಶೀಘ್ರವಾಗಿ ತೂಕ ಇಳಿಯುವುದು, ಹತೋಟಿಗೇ ಬಾರದ ಜ್ವರ ಮುಂತಾದವುಗಳು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ತನ್ಮೂಲಕ ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ನನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದರು.
     ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ ಮಾತನಾಡಿ, ಕ್ಯಾನ್ಸರ್ ರೋಗದ ಬಗೆಗಿನ ಅರಿವಿನ ಕೊರತೆಯು ಕ್ಯಾನ್ಸರ್ ರೋಗದಿಂದ ಮರಣವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ಯಾನ್ಸರ್ ರೋಗದ ಲಕ್ಷಣ, ಚಿಕಿತ್ಸೆ, ನಿಯಂತ್ರಣ, ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಿದಲ್ಲಿ ಕ್ಯಾನ್ಸರ್ ನಿಂದ ಮರಣವನ್ನಪ್ಪುವವರ ಸಂಖ್ಯೆ ಕಡಿಮೆಯಾಗಬಹುದು ಎಂದರು. ಜನರಲ್ಲಿ ಕ್ಯಾನ್ಸರ್ ನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ನವೆಂಬರ್ ೭ನ್ನು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಜಾಗೃತಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ ಎಂದರು. ಯುವಜನಾಂಗ ಮನಸ್ಸು ಮಾಡಿದರೆ ಸಾಧ್ಯವಾಗದ್ದು ಯಾವುದು ಇಲ್ಲ. ಆದುದರಿಂದ ಕ್ಯಾನ್ಸರ್ ನ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಯುವಜನಾಂಗದಿAದ ನಡೆಯಬೇಕಿದೆ ಎಂದರು.
     ಎನ್ನೆಸ್ಸೆಸ್ ಕಾರ್ಯದರ್ಶಿ ಕಾವ್ಯ, ಅಂಜನಾ, ಜಗತ್, ಅಭಿಲಾಶ್, ಅಜಿತ್ ಉಪಸ್ಥಿತರಿದ್ದರು. ವಿದ್ಯಾ ಸ್ವಾಗತಿಸಿ, ಸುಚಿತ್ರ ವಂದಿಸಿದರು. ಅಶ್ವಿನಿ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries