ಬದಿಯಡ್ಕ: ಶೇಣಿ ಶಾರದಾಂಬಾ ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಪೆರಡಾಲ ನವಜೀವನ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಒಟ್ಟು ೪೨೦ ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಹೈಸ್ಕೂಲ್ ವಿಭಾಗದಲ್ಲಿ ೧೩೪ ಅಂಕ ಹಾಗೂ ಹೈಸ್ಕೂಲ್ ಸಂಸ್ಕೃತದಲ್ಲಿ ೬೯ ಅಂಕಗಳೊAದಿಗೆ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಸಿಜು ಕೆ. ಮೂಲಕ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಹಾಗೂ ಅತಿಥಿಗಳು ಉಪಸ್ಥಿತರಿದ್ದರು. ನವಜೀವನ ಶಾಲೆಯ ಪರವಾಗಿ ಅಧ್ಯಾಪಕರುಗಳಾದ ರಾಜೇಶ್ ಅಗಲ್ಪಾಡಿ, ಸತ್ಯದಾಸನ್, ಶೈಲಜಾ, ವತ್ಸಲಾ, ರಕ್ಷಿತ್ ಹಾಗೂ ಶಾಲಾ ಸಿಬ್ಬಂದಿ ಗೋಪಾಲ ಜೊತೆಗಿದ್ದರು. ವಿದ್ಯಾರ್ಥಿಗಳ ಗಮನಾರ್ಹ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯಿನಿ ತಂಗಮಣಿ ಅಭಿನಂದಿಸಿದ್ದಾರೆ.