ಮಂಜೇಶ್ವರ: ಕೆಲಸಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಮುರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಸಾವಿಗೀಡಾದ ಕಡಂಬಾರಿನ ಬಾಬು ಅವರ ಪತ್ನಿ ಗಿರಿಜಾ ಅವರ ಕುಟುಂಬಕ್ಕೆ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಸದಸ್ಯರಿಗಿರುವ ವೈಯುಕ್ತಿಕ ಅಪಘಾತ ವಿಮಾ ಯೋಜನೆ ಪ್ರಕಾರ ಆರ್ಥಿಕ ಸಹಾಯವನ್ನು ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಬಿ.ವಿ.ರಾಜನ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಾಜನ್ ನಾಯರ್, ಆಡಳಿತ ಸಮಿತಿ ಉಪಾಧ್ಯಕ್ಷ ಯೋಗೀಶ್ ಕುಂಜತ್ತೂರು, ಬಿ.ಎಂ.ಅನAತ, ಎಸ್.ರಾಮಚಂದ್ರನ್, ಡಾ.ಕೆ.ಎ.ಕಾದರ್, ಯತೀಶ್ ಕಾಜೂರು, ರಾಮದಾಸ್, ಗಣೇಶ್, ರೇಖಾ, ಯಮುನಾ ಮೊದಲಾದವರು ಉಪಸ್ಥಿತರಿದ್ದರು. ಗಿರಿಜಾ ಕುಟುಂಬದ ಪರವಾಗಿ ಭವ್ಯಾ ಆರ್ಥಿಕ ಸಹಾಯವನ್ನು ಸ್ವೀಕರಿಸಿದರು.