ಬದಿಯಡ್ಕ: ೬೬ನೇ ಅಖಿಲ ಭಾರತ ಸಹಕಾರಿ ವಾರಚರಣೆಯ ಕಾಸರಗೋಡು ತಾಲೂಕು ಮಟ್ಟದ ಉದ್ಘಾಟನಾ ಸಮಾರಂಭವು ನವಂಬರ್ ೧೫ರಂದು ಅಪರಾಹ್ನ ೨ ಗಂಟೆಗೆ ನೀರ್ಚಾಲಿನಲ್ಲಿರುವ ಪೆರಡಾಲ ಸೇವಾ ಸಹಕಾರಿ ಬೇಂಕ್ ಸಭಾಂಗಣದಲ್ಲಿ ನಡೆಯಲಿರುವುದು. ನವಂಬರ್ ೧೪ರಿಂದ ೨೧ರ ತನಕ ಅಖಿಲ ಭಾರತ ಸಹಕಾರಿ ವಾರಾಚರಣೆಯನ್ನು ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್ ಮತ್ತು ವಿವಿಧ ಸಹಕಾರಿ ಸಂಸ್ತೆಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗುವುದು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಸಹಾಯಕ ನೊಂದಾವಣಾಧಿಕಾರಿ(ಜನರಲ್) ವಿ.ಮುಹಮ್ಮದ್ ನೌಶಾದ್ ಉದ್ಘಾಟಿಸಲಿರುವರು. ಅಬ್ದುಲ್ ಅಸೀಸ್ ಪಿ., ಲಸಿತಾ ಕೆ., ಕೆ.ಮುರಳೀಧರನ್, ಕೆ.ರಾಜಗೋಪಾಲನ್, ಪಿ.ಕೆ.ಬಾಲಕೃಷ್ಣನ್, ಪಿ.ಸಿ.ಸ್ಟೀಫನ್ ಉಪಸ್ಥಿತರಿರುವರು. ಪೆರಡಾಲ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಕಾರ್ಯದರ್ಶಿ ಅಜಿತಾ ಕುಮಾರಿ ವಿ. ಪಾಲ್ಗೊಳ್ಳಲಿರುವರು. ಬಳಿಕ ನಡೆಯುವ ವಿಚಾರ ಸಂಕಿರಣದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಸರ್ಕಾರದ ಹೊಸ ಯೋಜನೆಗಳು ವಿಚಾರದಲ್ಲಿ ನಿವೃತ್ತ ಸಹಾಯಕ ರಿಜಿಸ್ಟಾçರ್ ಶಶಿಧರನ್ ಕಾಟೂರು ವಿಷಯ ಮಂಡಿಸಲಿರುವರು. ಕುಂಬ್ಡಾಜೆ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಸAಜೀವ ಶೆಟ್ಟಿ, ಕಾರಡ್ಕ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಶಂಕರನ್, ಮಹಾತ್ಮಜಿ ಹೌಸಿಂಗ್ ಸೇವಾ ಸಂಘದ ಅಧ್ಯಕ್ಷ ಚೇಕೋಡ್ ಬಾಲಕೃಷ್ಣನ್ ನಾಯರ್ ಚರ್ಚೆಯಲ್ಲಿ ಭಾಗವಹಿಸಲಿರುವರು.