HEALTH TIPS

ಮಹಿಳೆಯರ ಮೇಲಿನ ಅಪರಾಧ ಕೇಸ್ ಗಳಲ್ಲಿ ಬಿಜೆಪಿ ಶಾಸಕರು ನಂಬರ್ 1, ಕಾಂಗ್ರೆಸ್ ನಂಬರ್ 2- ಎಡಿಆರ್

   
        ನವ ದೆಹಲಿ: ಚುನಾವಣಾ ನಿಗಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್  ರಿಫಾಮ್ರ್ಸ್ -ಎಡಿಆರ್ ಪ್ರಕಾರ ಮಹಿಳೆಯರ ಮೇಲಿನ ಅಪರಾಧ ಕೇಸ್ ಗಳಲ್ಲಿ ಬಿಜೆಪಿ ಶಾಸಕರು ನಂಬರ್ 1 ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಶಾಸಕರು ಎರಡನೇ ಸ್ಥಾನದಲ್ಲಿದ್ದಾರೆ.
         ಬಿಜೆಪಿಯ ಅತಿ ಹೆಚ್ಚಿನ 21 ಶಾಸಕರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ 16 ಹಾಗೂ ವೈಎಸ್ ಆರ್ ಕಾಂಗ್ರೆಸ್ ಪಕ್ಷದ 7 ಶಾಸಕರು  ಕೂಡಾ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಭಾಗಿದಾರರಾಗಿದ್ದಾರೆ ಎಂದು ಚುನಾವಣಾ ನಿಗಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್  ರಿಫಾಮ್ರ್ಸ್ (ಎಡಿಆರ್ ) ತಿಳಿಸಿದೆ. 2009 ರಿಂದ 2019ರ ಅವಧಿಯಲ್ಲಿ ಲೋಕಸಭಾ ಸಂಸದರ ಮೇಲಿನ  ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಮೂವರು ಸಂಸದರು ಹಾಗೂ ಆರು ಶಾಸಕರ ವಿರುದ್ಧ ಅತ್ಯಾಚಾರದಂತಹ ಗಂಭೀರ ಕೇಸ್ ಗಳು ದಾಖಲಾಗಿವೆ. ಕಳೆದ ಐದು ವರ್ಷಗಳಲ್ಲಿ ಅತ್ಯಾಚಾರ ಕೇಸ್ ಗಳನ್ನು ಎದುರಿಸುತ್ತಿರುವ 41 ಅಭ್ಯರ್ಥಿಗಳು ಪ್ರಮುಖ ಪಕ್ಷಗಳು ಟಿಕೆಟ್ ನೀಡಿವೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 66 ಅಭ್ಯರ್ಥಿಗಳಿಗೆ ಲೋಕಸಭಾ, ರಾಜ್ಯಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ. ಇಂತಹ 46 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಹಾಗೂ 40 ಅಭ್ಯರ್ಥಿಗಳಿಗೆ ಬಹುಜನ ಸಮಾಜವಾದಿ ಪಕ್ಷ ಟಿಕೆಟ್ ನೀಡಿದೆ ಎನ್ನಲಾಗಿದೆ.
       ಸಂಸದರ ಮೇಲಿನ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು 38 ರಿಂದ 126ಕ್ಕೆ ಏರಿಕೆಯಾಗಿದ್ದು, ಶೇ. 231 ರಷ್ಟು ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಸಂಸದರು ಹಾಗೂ ಶಾಸಕರು (16) ಮಹಿಳಾ ಪಿಡುಕರಾಗಿದ್ದಾರೆ. ಒಡಿಶಾ ಹಾಗೂ ಮಹಾರಾಷ್ಟ್ರದಲ್ಲಿ 12 ಶಾಸಕರು ಹಾಗೂ ಸಂಸದರು ಮಹಿಳೆಯರಿಗೆ ಸಂಬಂಧಿತ ಕೇಸ್ ಗಳನ್ನು ಎದುರಿಸುತ್ತಿದ್ದಾರೆ.
      ಕಳೆದ ಐದು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ಪ್ರಕರಣಗಳು ದೃಢಪಟ್ಟಿದ್ದರೂ ಮಹಾರಾಷ್ಟ್ರದಲ್ಲಿ 84 ಹಾಗೂ ಬಿಹಾರದಲ್ಲಿ 75 ಅಭ್ಯರ್ಥಿಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳೇ ಟಿಕೆಟ್ ನೀಡಿವೆ ಎಂದು ಎಡಿಆರ್ ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries