HEALTH TIPS

ಡಿ.11ರಿಂದ ಡಿ.13ರ ತನಕ ಗೋಸಾಡ ದೇವಸ್ಥಾನದ ಜಾತ್ರಾಮಹೋತ್ಸವ


       ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ಮಹಿಷಮರ್ಧಿನಿ ಅಮ್ಮನವರ ಶ್ರೀ ಭೂತಬಲಿ ಉತ್ಸವವು ಡಿ.11ರಿಂದ ಡಿ.13ರ ತನಕ ಜರಗಲಿರುವುದು. ಡಿ.10ರಂದು ರಾತ್ರಿ ಅತ್ತಾಳ ಪೂಜೆ, ಪ್ರಾರ್ಥನೆ, ಡಿ.11ರಂದು ಪೂರ್ವಾಹ್ನ ಉಷಃಪೂಜೆ, ಗಣಪತಿ ಹೋಮ, ಬಲಿವಾಡುಕೂಟಕ್ಕೆ ಭಕ್ತರಿಂದ ಬಲಿವಾಡು ಸಂಗ್ರಹ, ವಸ್ತುರೂಪದ ಮತ್ತು ನಗದು ರೂಪದ ದೇಣಿಗೆ ಸಂಗ್ರಹ, 8 ಗಂಟೆಗೆ ಪಾವೂರು ದೈವಸ್ಥಾನದಿಂದ ಶ್ರೀ ಧೂಮಾವತಿ ದೈವದ ಭಂಡಾರ ಆಗಮನ, 10 ಗಂಟೆಗೆ ಉಪ್ಪಳ ತಿಂಬರ ಶ್ರೀ ಲಕ್ಷ್ಮೀ ಮಹಿಳಾ ಭಜನ ಸಂಘದವರಿಂದ ಭಜನೆ, ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ದೀಪಾರಾಧನೆ, ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, ಗೋಸಾಡ ಶ್ರೀ ಮಹಿಷಮರ್ಧಿನಿ ಭಜನ ಸಂಘದವರಿಂದ ಭಜನೆ, 7ರಿಂದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘದವರಿಂದ ಕುಣಿತ ಭಜನೆ, ರಾತ್ರಿ 9ರಿಂದ ಶ್ರೀ ಭೂತಬಲಿ ಉತ್ಸವ, ಅನ್ನಸಂತರ್ಪಣೆ.
ಡಿ.12ರಂದು ಪೂರ್ವಾಹ್ನ ಉಷಃಪೂಜೆ, 9 ಗಂಟೆಗೆ ಶ್ರೀ ಭೂತಬಲಿ ಉತ್ಸವ, 10ಕ್ಕೆ ದರ್ಶನಬಲಿ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ, 11ಕ್ಕೆ ನವಕಾಭಿಷೇಕ, ಮಂತ್ರಾಕ್ಷತೆ, 12 ಗಂಟೆಗೆ ಶ್ರೀ ಧೂಮಾವತಿ ದೈವದ ತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಮಲ್ಲಮೂಲೆ ತರವಾಡು ಮನೆಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 8.30ಕ್ಕೆ ಕಾರ್ತಿಕ ಪೂಜೆ, ಪ್ರಸಾದ ವಿತರಣೆ, ದೈವಗಳ ತೊಡಂಙಲ್. ಡಿ.13ರಂದು ಪೂರ್ವಾಹ್ನ 7.30ಕ್ಕೆ ರಕ್ತೇಶ್ವರಿ ದೈವದ ಕೋಲ, 10 ಗಂಟೆಗೆ ನಾಗದೇವರಿಗೆ ತಂಬಿಲ, ಮಧ್ಯಾಹ್ನ 12 ಗಂಟೆಗೆ ಮಾಟೆ ಮನೆತನದವರ ವತಿಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries