ನವದೆಹಲಿ: ಈ ಬಾರಿ ಚಳಿಗಾಲ ಉತ್ತರ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಇಂದು ತಾಪಮಾನ 119 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ.
ರಾಷ್ಟ್ರ ರಾಜಧಾನಿ ದೆಹಲಿ ಚಳಿ ಬರೊಬ್ಬರಿ 119 ವರ್ಷಗಳ ದಾಖಲೆಯನ್ನು ಮುರಿದಿದ್ದು, ಈ ಕುರಿತಂತೆ ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ. 1901ರಲ್ಲಿ ದಾಖಲಾಗಿದ್ದ ಕನಿಷ್ಛ ತಾಪಮಾನಕ್ಕಿಂತಲೂ ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಹವಾಮಾನ ಇಲಾಖೆ, 1901ರಲ್ಲಿ ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆ 9.4 ಡಿಗ್ರಿ ಯಷ್ಟು ತಾಪಮಾನ ದಾಖಲಾಗಿತ್ತು. ಆದರೆ ಇಂದು ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆತಾಪಮಾನ 9ಡಿಗ್ರಿಗೆ ಳಿಯುವ ಮೂಲಕ ಆ 119 ವರ್ಷಗಳ ಹಳೆಯ ಶತಮಾನದ ದಾಖಲೆಯನ್ನು ಹಿಂದಿಕ್ಕಿದೆ. ಆ ಮೂಲಕ ದೆಹಲಿಯ 119 ವರ್ಷಗಳ ಇತಿಹಾಸದಲ್ಲಿಯೇ ಡಿಸೆಂಬರ್ ನ ಅತ್ಯಂತ ಚಳಿಯ ದಿನವಾಗಿದೆ. ಇನ್ನು ದೆಹಲಿಯ ಪಾಲಂನಲ್ಲಿ 9 ಡಿಗ್ರಿ ತಾಪಮಾನ ದಾಖಲಾಗಿದ್ದು, ಸಫ್ದರ್ ಜಂಗ್ ಪ್ರದೇಶದಲ್ಲಿ 9.4 ಡಿಗ್ರಿ ತಾಪಮಾನ ದಾಖಲಾಗಿದೆ.
ಈ ಹಿಂದೆ ವಾರದ ಹಿಂದಯಷ್ಟೇ ದೆಹಲಿಯಲ್ಲಿ ಕನಿಷ್ಠ ತಾಪಮಾನ 2.4 ಡಿಗ್ರಿಗೆ ಇಳಿಕೆಯಾಗಿ ದಾಖಲೆ ನಿರ್ಮಾಣವಾಗಿತ್ತು.