ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲಾ 13 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಭಾರತಿ ಅಭ್ಯರ್ಥಿಗಳಾದ ಜಯಂತ ಪಾಟಾಳಿ, ಶ್ಯಾಮರಾಜ ಡಿ, ಜನಾರ್ದನ ಪೂಜಾರಿ, ಆನಂದ ಭಂಡಾರಿ, ವೆಂಕಪ್ಪ ಭಟ್ ಕೆ, ಗೋಪಾಲಕೃಷ್ಣ ಕೆ, ಉದಯಕುಮಾರ್, ಸುನಿಲ್ ಕುಮಾರ್ ಟಿ.ಸಿ. (ಸಾಮಾನ್ಯ ವರ್ಗ), ರಾಮಭಟ್ ಎಚ್(ಠೇವಣಿದಾರರು), ಬಿಜು ಕೆ.(ಪರಿಶಿಷ್ಟ ಮೀಸಲಾತಿ), ಲಕ್ಷ್ಮಿ ಕೆ.ಭಟ್, ಶಶಿಕಲಾ, ಕಮಲಾಕ್ಷಿ (ಮಹಿಳಾ ಮೀಸಲಾತಿ) ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಎಲ್ಲಾ ನಿರ್ದೇಶಕರಿಗೆ, ಸಂಸ್ಥೆಯ ಎಲ್ಲಾ ಸದಸ್ಯರಿಗೆ, ನೌಕರ ವೃಂದದವರಿಗೆ, ಸಹಕಾರಿ ಇಲಾಖೆಗೆ ಸಹಕಾರ ಭಾರತಿ ಜಿಲ್ಲಾ ಸಮಿತಿ ಹಾಗೂ ಮಂಜೇಶ್ವರ ತಾಲೂಕು ಸಮಿತಿ ಅಭಿನಂದನೆಯನ್ನು ಸಲ್ಲಿಸಿದೆ.