ಪೆರ್ಲ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಎಣ್ಮಕಜೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಡಿ.14 ರಂದು ಶನಿವಾರ ಬೆಳಿಗ್ಗೆ 10 ರಿಂದ ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ಸಂವಿಧಾನ ಸಂರಕ್ಷಣಾ ಸಭೆ ನಡೆಯಲಿದೆ.
ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ.ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಎಣ್ಮಕಜೆ ಗ್ರಾ,.ಪಂ. ಅಧ್ಯಕ್ಷೆ ಶಾರದಾ ವೈ ಉದ್ಘಾಟಿಸುವರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ವನಿತಾ ಆರ್.ಶೆಟ್ಟಿ ಅವರು ಭಾರತದ ಸಂವಿಧಾನ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡುವರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಯು.ಶಾಮ ಭಟ್, ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕ ಮೊಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನ್ಯಾಯವಾದಿ ಚಂದ್ರಮೋಹನ್, ಮೆಹಮೂದ್ ಅಂಗಡಿಮೊಗರು, ರಾಮಕೃಷ್ಣ ರೈ ಕುದ್ವ, ರಾಮಚಂದ್ರ ಎಂ., ಪೃಥ್ವಿರಾಜ್ ಬಾಡೂರು, ಸದಾನಂದ ನಲ್ಕ, ಉದಯ ಸಾರಂಗ್ ಮೊದಲಾದವರು ಉಪಸ್ಥಿತರಿರುವರು.