ಪೆರ್ಲ:ಭಗವಾನ್ ಶ್ರೀ ಸತ್ಯಸಾಯಿ ಅಭಯ ನಿಕೇತನ್ ಕಾಸರಗೋಡು, ಗಣೇಶ್ ಸುಬ್ರಹ್ಮಣ್ಯನ್ ಬೆಂಗಳೂರು, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಎನ್ನೆಸ್ಸೆಸ್ ಘಟಕ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಸಂಘ, ಶ್ರೀ ಭಾರತಿ ನೇತ್ರ ಚಿಕಿತ್ಸಾಲಯ ಮುಜಂಗಾವು ಮತ್ತು ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಡಿ.15ರಂದು ಬೆಳಗ್ಗೆ 10ರಿಂದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಮಿತ್ತೂರು ಪುರುಷೋತ್ತಮ ಭಟ್ ಶಿಬಿರವನ್ನು ಉದ್ಘಾಟಿಸುವರು. ಬಿಪಿಎಲ್ ಕಾರ್ಡುದಾರರಿಗೆ ಉಚಿತ ಕನ್ನಡಕ ವಿತರಣೆ, ಉಚಿತ ಶಸ್ತ್ರ ಚಿಕಿತ್ಸೆ ಸೌಲಭ್ಯವಿದ್ದು ಪಡಿತರ ಪುಸ್ತಕದೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯುವಂತೆ ಸಂಯೋಜಕರು ತಿಳಿಸಿದ್ದಾರೆ.