ಕಾಸರಗೋಡು: ವಿವಿಧ ಯೋಜನೆಗಳ ಪ್ರಗತಿ ಅವಲೋಕನ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಬ್ಲಾ.ಪಂ., ನಗರಸಭೆ ಮಟ್ಟದ ಅವಲೋಕನ ಸಭೆಗಳು ಡಿ.17ರಿಂದ 20 ವರೆಗೆ ಕಾಸರಗೋಡು ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ನಡೆಯಲಿವೆ.
ಡಿ.17ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಬ್ಲಾಕ್ ಪಂಚಾಯತ್, ಬ್ಲಾಕ್ ವ್ಯಾಪ್ತಿಯ ಗ್ರಾಮಪಂಚಾಯತ್ ಗಳ ಸಭೆ, 11.30ರಿಂದ ಕಾರಡ್ಕ ಬ್ಲಾಕ್ ಪಂಚಾಯತ್, ವ್ಯಾಪ್ತಿಯ ಗ್ರಾಪಂಚಾಯತ್ ಗಳ, 18ರಂದು ಬೆಳಗ್ಗೆ 10 ಗಂಟೆಗೆ ಮಂಜೇಶ್ವರ ಬ್ಲಾಕ್ ಪಂಚಾಯತ್, ವ್ಯಾಪ್ತಿಯ ಗ್ರಾಮಪಂಚಾಯತ್ ಗಳ, 11.30ರಿಂದ ಪರಪ್ಪ ಬ್ಲಾಕ್ , ವ್ಯಾಪ್ತಿಯ ಗ್ರಾಮಪಂಚಾಯತ್ ಗಳ, 19ರಂದು ಬೆಳಗ್ಗೆ 10 ಗಂಟೆಗೆ ನೀಲೇಶ್ವರ ಬ್ಲಾಕ್, ವ್ಯಾಪ್ತಿಯ ಗ್ರಾಮಪಂಚಾಯತ್ ಗಳ, 11.30ರಿಂದ ಕಾಞಂಗಾಡ್ ಬ್ಲಾಕ್, ವ್ಯಾಪ್ತಿಯ ಗ್ರಾಮಪಂಚಾಯತ್ ಗಳ, 20ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಜಿಲ್ಲಾ ಪಂಚಾಯತ್, ನೀಲೇಶ್ವರ, ಕಾಞಂಗಾಡ್ ನಗರಸಭೆಗಳ ಅವಲೋಕನಸಭೆಗಳು ಜರುಗಲಿವೆ.
ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಪೆÇ್ರಫೆÇೀರ್ಮ ದಲ್ಲಿ ಯೋಜನೆ ಪ್ರಗತಿ ಸಿದ್ಧಪಡಿಸಿ ತಲಾ 8 ನಕಲುಗಳನ್ನು ಡಿ.16ರ ಮುಂಚಿತವಾಗಿ ಜಿಲ್ಲಾ ಯೋಜನೆ ಸಮಿತಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.