HEALTH TIPS

ತುಳುವಿನ ಸ್ಥಾನಮಾನ ಇನ್ನಷ್ಟು ಉನ್ನತಿಗೇರಬೇಕು-ಲಲಿತಕಲಾ ಸದನದಲ್ಲಿ ರಾಷ್ಟ್ರೀಯ ತುಳು ವಿಚಾರ ಸಂಕಿರಣಡಿ.17ರಿಂದ-ಸುದ್ದಿಗೋಷ್ಠಿಯಲ್ಲಿ ಮಾಹಿತಿ


        ಕುಂಬಳೆ: ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣವು ಕಾಸರಗೋಡಿನ ತುಳು ಭಾಷೆಯ ಹಿನ್ನೆಲೆ, ಕಾಸರಗೋಡಿನ ತುಳು ಸಾಹಿತ್ಯ ಮತ್ತು ತುಳು ಸಂಶೋಧನೆಯ ಸಾಧ್ಯತೆ ಎಂಬ ವಿಷಯಗಳಲ್ಲಿ  ಡಿ.17, 18ರಂದು ಕಾಸರಗೋಡು ಲಲಿತ ಕಲಾಸದನದಲ್ಲಿ ಜರಗಲಿದೆ ಎಂದು ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
      ಡಿ.17 ರಂದು ಬೆಳಿಗ್ಗೆ 10.15 ಕ್ಕೆ ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರ ಸಂಕಿರಣವನ್ನು ರಾಜ್ಯ ವಿದ್ಯುತ್ ಖಾತೆಯ ಸಚಿವ ಎಂ.ಎಂ.ಮಣಿ ಉದ್ಘಾಟಿಸುವರು. ಸಂಸದ ರಾಜಮೋಹನ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಅಕಾಡೆಮಿಯ ವಿಶೇಷ ಸಂಚಿಕೆ ತೆಂಬರೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸುವರು. ಹಾವೇರಿಯ ಜನಪದ ವಿವಿಯ ನಿಕಟಪೂರ್ವ ಉಪಕುಲಪತಿ ಡಾ.ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡುವರು. ಶಾಸಕ ಎಂ.ಸಿ.ಕಮರುದ್ದೀನ್, ಕುಂಞÂರಾಮನ್, ರಾಜಗೋಪಾಲನ್, ಜಿ.ಪಂ.ಅಧ್ಯಕ್ಷ ಎ.ಜಿ.ಸಿ.ಬಶೀರ್, ಸ್ಥಾಯೀ ಸಮಿತಿ ಅಧ್ಯಕ್ಷೆ ಬಿ.ಫಾತಿಮಾ ಇಬ್ರಾಹಿಂ, ನ್ಯಾಯವಾದಿ ವಿ.ಪಿ.ಪಿ.ಮುಸ್ತಫ, ನ್ಯಾಯವಾದಿ ಕೆ.ಶ್ರೀಕಾಂತ್, ಮಂಜೇಶ್ವರ ಬ್ಲಾ.ಪಂ.ಸದಸ್ಯ ಕೆ.ಆರ್.ಜಯಾನಂದ, ಅರುಣ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ನಡೆಯಲಿರುವ ಕಾಸರಗೋಡಿನ ತುಳು ಭಾಷೆಯ ಸೊಗಡು ಎಂಬ ವಿಷಯದ ಬಗ್ಗೆ ಸಮಗ್ರ ಶಿಕ್ಷಾ ಯೋಜನೆಯ ಜಿಲ್ಲಾ ನಿರೂಪಣಾಧಿಕಾರಿ ನಾರಾಯಣ ದೇಲಂಪಾಡಿ ಹಾಗೂ ಕಾಸರಗೋಡಿನ ತುಳು ಸಾಹಿತ್ಯ ಎಂಬ ವಿಷಯದಲ್ಲಿ ತುಳು ಸಾಹಿತಿ ಡಾ.ಕಿಶೋರ್ ಕುಮಾರ್ ರೈ ಶೇಣಿ ವಿಚಾರ ಮಂಡನೆ ನಡೆಸುವರು. ಬಳಿಕ ರಸಪ್ರಶ್ನೆ ಸ್ಪರ್ಧೆ,ಆಟಿ ಕಳಂಜ, ಪ್ರಬಂಧ ಸ್ಪರ್ಧೆ ಮೊದಲಾದವುಗಳು ನಡೆಯಲಿದೆ. ಕಂಗಿಲು ನಲಿಕೆ, ತುಳು ಯಕ್ಷಗಾನ ಭಾಗವತಿಕೆ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
    ಡಿ.18 ರಂದು ಬೆಳಿಗ್ಗೆ 9 ರಿಂದ ತುಳು ಲಿಪಿ ಕಲಿಕಾ ಕಾರ್ಯಾಗಾರ, ತುಳು ಸಂಶೋಧನಾ ಸಾಧ್ಯತೆಗಳ ವಿಚಾರ ಸಂಕಿರಣ ನಡೆಯಲಿದೆ. ಅಪರಾಹ್ನ 2 ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಸಮಾರೋಪ ಭಾಷಣ ಮಾಡುವರು. ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು. ತುಳು ಕವಿತೆ, ಪಾಡ್ದನ, ಜನಪದ ನೃತ್ಯ ಮೊದಲಾದ ಸಾಂಸ್ಕøತಿಕ ವೈವಿಧ್ಯಗಳು ನಡೆಯಲಿವೆ.
      ಸುದ್ದಿಗೋಷ್ಠಿಯಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು, ಕಾರ್ಯದರ್ಶಿ ವಿಜಯಕುಮಾರ್ ಪಾವಳ, ಸದಸ್ಯರುಗಳಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಚಿತ ರೈ ಪೆರ್ಲ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries