ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಧನುಪೂಜಾ ಸಮಿತಿ, ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಡಿ.17ರಿಂದ ಜ14ರ ವರೆಗೆ ಪ್ರತಿದಿನ ಬೆಳಗ್ಗೆ ಶ್ರೀ ದೇವರಿಗೆ ಧನುಪೂಜೆ ಹಾಗೂ ಧನು ಮಾಸದ ವಿಶೇಷ ಭಜನೆ ಜರುಗಲಿದೆ.
ಡಿ.17ರಂದು ಬೆಳಗ್ಗೆ 5ರಿಂದ ರುದ್ರ ಪಾರಾಯಣ, ನಿವೃತ್ತ ಶಿಕ್ಷಕ ವಾಟೆ ಮಹಾಲಿಂಗ ಭಟ್ ಭಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.ಧನು ಪೂಜಾ ಸಮಿತಿ ಅಧ್ಯಕ್ಷ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.ಕೆಡೆಂಜಿ ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ವಸಂತ ಪೈ ಉಪಸ್ಥಿತರಿರುವರು. ಧನು ಪೂಜೆಯ ದಿನಗಳಲ್ಲಿ ಭಜನೆ, ಭಕ್ತಿ ಸಂಗೀತ, ಕುಣಿತ ಭಜನೆ,ಹರಿಕಥಾ ಸತ್ಸಂಗ, ಸಂಗೀತ ಕಛೇರಿ, ದೇವರನಾಮ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು, ಉಪಹಾರ ವ್ಯವಸ್ಥೆ ಇರುವುದಾಗಿ ಧನುಪೂಜಾ ಸಮಿತಿ ಪ್ರಕಟಣೆ ತಿಳಿಸಿದೆ.