ಪೆರ್ಲ:ಕರಾಡ ಕಲಾ ಸಾಹಿತ್ಯ ಪ್ರತಿಷ್ಠಾನ ಪೆರ್ಲ ಇದರ 18ನೇ ಕರಾಡವಾಣಿ ವಿಶೇಷಾಂಕ ಬಿಡುಗಡೆ ಸಮಾರಂಭ ಇಂದು(ಡಿ.8ರಂದು) ಬೆಳಗ್ಗೆ 10ಕ್ಕೆ ಕಾರ್ಕಳ ತೆಳ್ಳಾರ್ ಉಪ್ಪಂಗಳ ಕೃಷ್ಣ ಭಟ್ ಅವರ ಮನೆ ಬಲಾಜೆಯಲ್ಲಿ ಜರಗಲಿದೆ.
ಪ್ರತಿಷ್ಠಾನದ ಅಧ್ಯಕ್ಷ ವೆಂಕಟ ಸುಬ್ಬ ರಾವ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಫುಲ್ಲಾ ಕುಂಡೇಲು ಉಡುಪಿ ವಿಶೇಷಾಂಕ ಬಿಡುಗಡೆಗೊಳಿಸುವರು. ಪಿ.ಸುಬ್ರಹ್ಮಣ್ಯ ಭಟ್ ಪರಾಡ್ಕರ್ ಎರ್ಪಲೆ ಗುಂಡ್ಯಡ್ಕ ಕರಾಡ ಕಥಾ-ಕವಿತೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವರು. ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಗುಂಡ್ಯಡ್ಕ ಅಧ್ಯಕ್ಷ ಕೆ.ಗಣಪತಿ ಭಟ್ ದೇವ್ ಜಿ ಗೌರು-ಮಾಧವ ಭಟ್ ಶಿಕ್ಷಣ ನಿಧಿಯಿಂದ ಧನಸಹಾಯ ಹಾಗೂ ಶೈಕ್ಷಣಿಕ ದತ್ತು ಸ್ವೀಕಾರ ಧನ ಸಹಾಯ ವಿತರಿಸುವರು.
ಮಧ್ಯಾಹ್ನ 2ರಿಂದ ಶಾರದಾ ಬಿ.ಭಟ್ ಇಲ್ಲಿಬೆಟ್ಟು, ಶ್ರೀನಿವಾಸ ಭಟ್ ಉಪ್ಪಂಗಳ-ಬಲಾಜೆ, ಶ್ರೀರಂಜಿನಿ, ಅದ್ವೈತ ಶರ್ಮ, ಪ್ರಮೋದ್ ಜಾಕಿಬೆಟ್ಟು ಅವರ ಹಾಡುಗಾರಿಕೆ, ರಾಜಶ್ರೀ ಪರಾಡ್ಕರ್ ಎರ್ಪಲೆ, ಆದ್ಯ ಶೆಟ್ಟಿಬೆಟ್ಟು-ಪಡ್ರೆ, ಸೃಷ್ಠಿ ಶರ್ಮ, ನಿರೀಕ್ಷಾ ಇಲ್ಲಿಬೆಟ್ಟು, ಯಜ್ಞಿಕಾ ಕಾರ್ಕಳ ಅವರ ನೃತ್ಯ, ಶಾರದಾ ಬಿ.ಭಟ್, ಕೌಸ್ತುಭ, ಪ್ರದ್ಯುಮ್ನ ಮಂಗಲ್ಪಾದೆ ಅವರ ವೀಣಾವಾದನ, ಸುಮಂತ್ ಕುಂಡೇಲು ಅವರ ಕೊಳಲುವಾದನ, ವಿವಿಧ ವಿನೋದಾವಳಿ ಕಾರ್ಯಕ್ರಮಗಳು ನಡೆಯಲಿವೆ.