ಪೆರ್ಲ:ಕೇರಳ ವನ ಮತ್ತು ವನ್ಯಜೀವಿ ಇಲಾಖೆ, ಕಾಸರಗೋಡು ವಿಭಾಗ, ಕಾಸರಗೋಡು ವಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಾಣೀನಗರ ವನ ಸಂರಕ್ಷಣಾ ಸಮಿತಿಯ ಸಾರ್ವಜನಿಕ ಸಭೆ ಹಾಗೂ 5 ವರ್ಷದ ಕ್ರಿಯಾ ಯೋಜನೆ ತಯಾರಿ, ಪಾಲುದಾರಿತ ಗ್ರಾಮ ವಿಶ್ಲೇಷಣೆ ಮತ್ತು ಸಾರ್ವಜನಿಕ ಸಭೆ ಡಿ 18ರಂದು ಬೆಳಗ್ಗೆ 10ಕ್ಕೆ ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿ ನಡೆಯಲಿದೆ.
ಎಣ್ಮಕಜೆ ಪಂಚಾಯಿತಿ 6ನೇ ವಾರ್ಡ್ ಸದಸ್ಯೆ ಚಂದ್ರಾವತಿ ಎಂ.ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಾಣೀನಗರ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಯತೀಂದ್ರ ರೈ ಎಂ.ಅಧ್ಯಕ್ಷತೆ ವಹಿಸುವರು. ಕಾಸರಗೋಡು ವಿಭಾಗೀಯ ಅರಣ್ಯ ಅಧಿಕಾರಿ ಪಿ.ಕೆ.ಅನೂಪ್ ಕುಮಾರ್ ಕಾರ್ಯಾಗಾರ ಉದ್ಘಾಟಿಸುವರು.ರೇಂಜ್ ಫಾರೆಸ್ಟ್ ಅಧಿಕಾರಿ ಎನ್.ಅನಿಲ್ ಕುಮಾರ್ ಮುಖ್ಯ ಭಾಷಣ ಮಾಡುವರು. ವರಯಾಲ್ ಅರಣ್ಯ ಉಪ ವಲಯಾಧಿಕಾರಿ ಎಸ್.ಎನ್.ರಾಜೇಶ್ ಯೋಜನೆಯ ಕುರಿತು ಮಾಹಿತಿ ನೀಡಲಿದ್ದಾರೆ.ವಾಣೀನಗರ ವಾರ್ಡ್ ಸದಸ್ಯೆ ಶಶಿಕಲಾ ವೈ, ಪತ್ರಕರ್ತ ಶ್ರೀಪಡ್ರೆ, ವಿಭಾಗೀಯ ಸಂಯೋಜಕ ಸಿ.ವಿಜಯ ಕುಮಾರ್, ಅರಣ್ಯ ಉಪ ವಲಯಾಧಿಕಾರಿ ಬಿ.ವಿ.ರಾಜಗೋಪಾಲನ್, ಸೆಕ್ಷನ್ ಅರಣ್ಯ ಅಧಿಕಾರಿ ಎನ್.ವಿ.ಸತ್ಯನ್, ಕೆ.ಎನ್.ರಮೇಶನ್, ವನ ಸಂರಕ್ಷಣಾ ಸಮಿತಿ ಸದಸ್ಯೆ ವಲ್ಸಮ್ಮ ಉಪಸ್ಥಿತರಿರುವರು. ಕಾರ್ಯ ಯೋಜನೆ, ರೂಪುರೇಷೆ ತಯಾರಿ, ಪ್ರಶ್ನೋತ್ತರ, ನೂತನ ಸಮಿತಿ ರಚನೆ ನಡೆಯಲಿದೆ.