ಕಾಸರಗೋಡು: ಪಲ್ಸ್ ಪೆÇೀಲಿಯೋ ಇಮ್ಯೂನೈಸೇಶನ್ ಯೋಜನೆ ಪ್ರಕಾರ ರಾಜ್ಯದಲ್ಲಿ ಪೆÇೀಲಿಯೋ ಲಸಿಕೆ ವಿತರಣೆ ಜ.19 ರಂದು ನಡೆಯಲಿದೆ. ಐದು ವರ್ಷಕ್ಕಿಂತ ಕೆಳ ಪ್ರಾಯದ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಅಂಗನವಾಡಿಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು, ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಸಹಿತ ವಿವಿಧೆಡೆಗಳಲ್ಲಿ ಇದಕ್ಕಾಗಿ ವ್ಯವಸ್ಥೆ ಏರ್ಪಡಿಸಲಾಗುವುದು. ಬೆಳಗ್ಗೆ 8 ರಿಂದ ಸಂಜೆ 5 ರ ವರೆಗೆ ಲಸಿಕೆ ನೀಡಲಾಗುವುದು. 19 ರಂದು ಲಸಿಕೆ ನೀಡದವರಿಗೆ ವಾಲಂಟಿಯರ್‍ಗಳು ಮರುದಿನ ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡುವರು.