ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ನಗರಪ್ರದಕ್ಷಿಣೆ ಕಾರ್ಯಕ್ರಮ ಡಿಸೆಂಬರ್ 19ರಂದು ನಡೆಯಲಿರುವುದು. ದೇವಸ್ಥಾನ ನವೀಕರಣ ಸಮಿತಿ, ಭಕ್ತ ಜನ ಸಮಿತಿ ಹಾಗೂ ಪ್ರಾದೇಶಿಕ ಸಮಿತಿಗಳ ಸಂಯುಕ್ತ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ನಗರಪ್ರದಕ್ಷಿಣೆ ಕಾರ್ಯಕ್ರಮ ಯಶಸ್ವಿಗಾಗಿ ವಕೀಲ ಸದಾನಂದ ರೈ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಜಯದೇವ ಖಂಡಿಗೆ ವರದಿ ವಾಚಿಸಿದರು. ಪ್ರಾದೇಶಿಕ ಸಮಿತಿಗಳ ಪರವಾಗಿ ಕೃಷ್ಣಪ್ರಸಾದ್, ಉದಯ ಕುಮಾರ್, ಗಣೇಶ್ ಭಟ್ ಅಳಿಕೆ, ಸತೀಶ್ ಬಿ, ನಾರಾಯಣ ಮಾಸ್ಟರ್, ರಘು ಮೀಪುಗುರಿ, ಕೇಂದ್ರ ಸಮಿತಿ ಸದಸ್ಯರಾದ ಮಂಜುನಾಥ ಕಾಮತ್, ಮುರಳಿ ಗಟ್ಟಿ, ಗಿರೀಶ್ ಕೂಡ್ಲು ಉಪಸ್ಥಿತರಿದ್ದರು. ನಾರಾಯಣಯ್ಯ ಸ್ವಾಗತಿಸಿದರು. ಪ್ರಭಾಶಂಕರ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಎಂ.ಆರ್ ವಂದಿಸಿದರು.